ಈದ್‌ ಮಿಲಾದ್‌ ಬ್ಯಾನರ್‌ನಲ್ಲಿ ಫ್ರೀ ಪ್ಯಾಲೆಸ್ತೀನ್‌ ಘೋಷಣೆ

ಕೊಪ್ಪಳ : ಈದ್‌ ಮಿಲಾದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪೊಲೀಸರು ಹಲವು ನಿಯಮಾವಳಿಗಳನ್ನು ರಚಿಸಿದ್ದಾರೆ. ಇದರಲ್ಲಿ ಬೇರೆ ದೇಶದ ಕುರಿತಾದ ಬ್ಯಾನರ್‌, ಚಿತ್ರಗಳ ಪ್ರದರ್ಶನ ಮಾಡಬಾರದು, ಘೋಷಣೆಗಳನ್ನು ಕೂಗಬಾರದು ಎಂಬ ನಿಯಮವೂ ಇದೆ. ಆದರೆ ಕೊಪ್ಪಳದಲ್ಲಿ ಈದ್​ ಮಿಲಾದ್​ ಬ್ಯಾನರ್​ನಲ್ಲಿ ಫ್ರೀ ಪ್ಯಾಲೆಸ್ತೀನ್ ಬರಹ ಹಾಕಿ ಮತ್ತೆ ಉದ್ಧತಟತನ ಮೆರೆದಿದ್ದಾರೆ. ಹಿಂದೂ ಸಂಘಟನೆಗಳ ವಿರೋಧದ ಬಳಿಕ ಫ್ರೀ ಪ್ಯಾಲೆಸ್ತೀನ್ ಬರಹಕ್ಕೆ ತೇಪೆ ಹಾಕಿ ಮರೆಮಾಚಲಾಗಿದೆ. ಬ್ಯಾನರ್​ನ‌ ಒಂದು ಭಾಗದಲ್ಲಿ ‘ಫ್ರೀ ಪ್ಯಾಲೆಸ್ತೀನ್’ ಬರಹ ಹಾಕಲಾಗಿತ್ತು. ಇದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಫ್ರೀ ಪ್ಯಾಲೆಸ್ತೀನ್ ಎಂಬ ಬರಹಕ್ಕೆ ತೇಪೆ ಹಾಕಿದ್ದಾರೆ.

ಈದ್​ ಮಿಲಾದ್​ ಹಬ್ಬ ಆಚರಣೆ ಹಿನ್ನೆಲೆ ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಲ್ಲಾ ಏರಿಯಾದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಇದಕ್ಕೆ ಹಿಂದೂ ಸಂಘಟನೆಗಳ ವಿರೋಧ ಹೆಚ್ಚಾಗುತ್ತಿದ್ದಂತೆ ಸಂಘಟಕರು ಬ್ಯಾನರ್ ಬದಲಾವಣೆ ಮಾಡಿ ಈದ್ ಮಿಲಾದ್ ಹಬ್ಬದ ಹೊಸ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top