ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ ಕಾರ್ಯಕ್ರಮವಾಗಿ ಪೆರಿಯಡ್ಕ ಮದುವನದಲ್ಲಿ ಮಧುರ ಮನಸು ಸ್ನೇಹಕೂಟವೆಂಬ ವಿಶೇಷ ಕಾರ್ಯಕ್ರಮ ಜರಗಿತು.
ತೀರ್ಥರೂಪರಾದ ದಿ. ತಿರುಮಲೇಶ್ವರ ಭಟ್ ಕಟ್ಟದಮೂಲೆ ಸಂಸ್ಮರಣೆಯನ್ನು ಶ್ರೀ ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರೊಫೆಸರ್ ಬಿ. ವಿ ಆರ್ತಿಕಜೆ ಪುತ್ತೂರು, ನೀ.ಸು.ಮಧ್ಯಸ್ಥ, ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು, ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ.ಆಚಾರ್ಯ ಅಲಂಕಾರು ಅವರಿಗೆ ಸ್ಮೃತಿ ಗೌರವ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾವಿದ ಮಹಾಲಿಂಗೇಶ್ವರ ಭಟ್ ಅವರನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹರೀಶ್ ಆಚಾರ್ಯ ಬಾರ್ಯ ಸನ್ಮಾನ ಪತ್ರ ವಾಚಿಸಿದರು.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ವಸಂತಕುಮಾರ ತಾಳ್ತಜೆ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ ಶೆಣೈ ರಾಮನಗರ, ಶ್ರೀಧರ ಭಟ್ ಕೆ, ಸಾವಿತ್ರಿಬಾಯಿ, ಶೋಭಾ ಬಿ ಆನಂದ್, ಹರಿಕಿರಣ್ ಕೊಯ್ಲ, ಬಿ. ಸುಬ್ರಮಣ್ಯ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ವೈಶಾಲಿ ಕಾರ್ಯಕ್ರಮ ನಿರೂಪಿಸಿದು. ದುರ್ಗಾಮಣಿ ವಂದಿಸಿದರು.
ಬಳಿಕ ಶ್ರೀ ಮಹಾಭಾರತ ಸರಣಿಯ 47ನೇ ಕಾರ್ಯಕ್ರಮವಾಗಿ ಪಾರ್ಥಸಾರಥ್ಯ ಮತ್ತು ಭಕ್ತ ಸುಧನ್ವ ತಾಳಮದ್ದಳೆಯು ಪೆರಿಯಡ್ಕ ಸಾಂಸ್ಕೃತಿಕ ಕಲಾವೇದಿಕೆಯ ಸಹಯೋಗದಲ್ಲಿ ಜರಗಿತು.
ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ-(ಶ್ರೀಕೃಷ್ಣ 1),
ಶ್ರೀಧರ ಎಸ್.ಪಿಸುರತ್ಕಲ್ -(ಶ್ರೀಕೃಷ್ಣ2), ಸಂಜೀವ ಪಾರೆಂಕಿ- (ಅರ್ಜುನ), ಗುಡ್ಡಪ್ಪ ಬಲ್ಯ:(ಕೌರವ1), ಮಹಾಲಿಂಗೇಶ್ವರ ಭಟ್-(ಕೌರವ2), ಗೀತಾ ಕುದ್ದಣ್ಣಾಯ(-ಬಲರಾಮ ), ಗಣರಾಜ ಕುಂಬ್ಳೆ-(ಸುಧನ್ವ1), ದಿವಾಕರ ಆಚಾರ್ಯ ಹಳೆನೇರೆಂಕಿ-(ಸುಧನ್ವ2), ಅಂಬಾ ಪ್ರಸಾದ ಪಾತಾಳ-(ಪ್ರಭಾವತಿ), ಜಯರಾಮ ನಾಲ್ಗುತ್ತು-(ಶ್ರೀಕೃಷ್ಣ), ಹರೀಶ್ ಬಾರ್ಯ-(ಅರ್ಜುನ), ನಾರಾಯಣ ಭಟ್ ಆಲಂಕಾರು-(ಹಂಸಧ್ವಜ), ಬಾಲಕೃಷ್ಣ ಕೇಪುಳು-(ಶಂಖ-ಲಿಖಿತ), ಶ್ರುತಿ ವಿಸ್ಮಿತ್-ವೃಷ ಕೇತು ಹಾಗೂ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಪದ್ಮನಾಭ ಕುಲಾಲ್, ನಿತೀಶ್ ಕುಮಾರ್. ವೈ ಸುರೇಶ್ ರಾವ್ ಬನ್ನೆಂಗಳ, ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಮೋಹನ ಕುಮಾರ್ ಶರವೂರು,
ಶ್ರೀಪತಿ ಭಟ್ ಇಳಂತಿಲ, ಪ್ರಚೇತ್ ಆಳ್ವ, ಶ್ರೀಹರಿ ನಗ್ರಿ ಭಾಗವಹಿಸಿದ್ದರು. ಕಲಾವಿದರನ್ನು ಮಹಾಲಿಂಗೇಶ್ವರ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು.