ಸವಣೂರು: ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಭವನದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರದಿ ಸಾಲಿನಲ್ಲಿ ಸಂಘ 365.50 ಕೋಟಿ ವಾರ್ಷಿಕ ವ್ಯವಹಾರ ನಡೆಸಿ 1.52 ಕೋಟಿ ರೂ. ಲಾಭಗಳಿಸಿದೆ. ಸದಸ್ಯರಿಗೆ 14 ಶೇ. ಡಿವಿಡೆಂಡ್ ಘೊಷಿಸಲಾಗಿದೆ ಎಂದು ಹೇಳಿದರು.
ಸದಸ್ಯರ ಸಹಕಾರದಿಂದ ಸತತವಾಗಿ 22ನೇ ಬಾರಿಗೆ ‘ಎ’ ತರಗತಿ ಆಡಿಟ್ ವರ್ಗೀಕರಣದೊಂದಿಗೆ, ಶೇಕಡಾ 99.22 ವಸೂಲಾತಿ ಸಾಧನೆ ಮಾಡಲಾಗಿದೆ.
ವರದಿ ವರ್ಷದಲ್ಲಿ 3451 ಸದಸ್ಯರಿದ್ದು 5.52 ಕೋಟಿ ರೂ. ಪಾಲು ಬಂಡವಾಳ ಮತ್ತು 36.39 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಸದಸ್ಯರಿಗೆ 55.41 ಕೋಟಿ ಸಾಲ ವಿತರಿಸಿ, ವರ್ಷಾಂತ್ಯಕ್ಕೆ 52.34 ಕೋಟಿ ರೂ. ಹೊರಬಾಕಿ ಇರುತ್ತದೆ. ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕಿನ ಹೊರಬಾಕಿ ಸಾಲ 30.69 ಕೋಟಿ ರೂ. ಇರುತ್ತದೆ ಎಂದರು.
ಸಂಘದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲ ಸದಸ್ಯರನ್ನು, ಠೇವಣಾತಿದಾರರನ್ನು, ಗ್ರಾಹಕ ಬಂಧುಗಳನ್ನು ಹಾಗೂ ಸಂಘ ಸಂಸ್ಥೆಯವರನ್ನು ಮಹಾಸಭೆ ಪರವಾಗಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ತಮ್ಮ ಸಲಹೆ-ಸೂಚನೆ. ಮಾರ್ಗದರ್ಶನವನ್ನು ಬಯಸುತ್ತೇನೆ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ. ಮಾತನಾಡಿ, ವರದಿ ವರ್ಷದಲ್ಲಿ 13 ಆಡಳಿತ ಮಂಡಳಿ ಸಭೆ ನಡೆಸಿದ್ದು, ಸಂಘದ ಸರ್ವತೋಮುಖ ಅಭಿವೃದ್ಧಿ ಹಾಗೂ ಸದಸ್ಯರ ಹಿತ ದೃಷ್ಟಿಯ ಬಗ್ಗೆ ವಿಚಾರ
ವಿನಿಮಯ ನಡೆಸಲಾಗಿದೆ. ರುತ್ತಾರೆ. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಿಗೆ, ನಮ್ಮ ಸಂಘಕ್ಕೆ ಆಗತ್ಯವುಳ್ಳ ಸಾಲಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಿ, ಸಹಕರಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗಕ್ಕೆ, ಸವಣೂರು ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗಕ್ಕೆ, ಸಾಲ ವಿತರಣೆ ಮತ್ತು ವಸೂಲಾತಿ, ಬಡ್ಡಿ ಸಹಾಯಧನ ಯೋಜನೆಯ ಅನುಷ್ಠಾನಕ್ಕಾಗಿ ನಮ್ಮೊಂದಿಗೆ ಸತತವಾಗಿ ಶ್ರಮಿಸಿದ ಎಸ್.ಸಿ.ಡಿ.ಸಿ.ಸಿ.ಬ್ಯಾಂಕಿನ ವಲಯ ಮೇಲ್ವಿಚಾರಕ ವಸಂತ್ ಎಸ್ . ಅವರಿಗೂ ಆಡಳಿತ ಮಂಡಳಿಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕರುಗಳಾದ ಉದಯ ರೈ ಮಾಡೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್ ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಮ್. ಎಸ್. ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಗಂಗಾಧರ ನಾಯ್ಕ ಪೆರಿಯಡ್ಕ, ತಿಮ್ಮಪ್ಪ ಬನಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ನಾಟಿ ವೈದ್ಯ ವಾಸುದೇವ ಇಡ್ಯಾಡಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಪುರಸ್ಕೃತೆ ಶಾರದ ಮಾಲೆತ್ತಾರು ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಪದವಿಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಗಳಿಸಿದವರನ್ನು ಗೌರವಿಸಲಾಯಿತು. ಸಿಬ್ಬಂದಿಗಳು ಸಹಕರಿಸಿದರು.