ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ವರದಿ ವರ್ಷದಲ್ಲಿ 2.45 ಕೋಟಿ ರೂ. ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ : ನವೀನ್ ಡಿ.

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ರೈತ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನವೀನ್ ಡಿ. ಮಹಾಸಭೆಯ ಅಧ್ಯಕ್ಷತೆ ವಹಿಸಿ, ಸಂಘವು 2022-23ನೇ ಸಾಲಿನಲ್ಲಿ 1.70 ಕೋಟಿ ರೂ. ಲಾಭಗಳಿಸಿದ್ದು, ವರದಿ ವರ್ಷದಲ್ಲಿ 2.45 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ. 18 ಲಾಭಾಂಶ ವಿತರಿಸಲು ಆಡಳಿತ ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದರು.

ಸದಸ್ಯರ ಸಹಕಾರದಿಂದ ವರದಿ ಸಾಲಿನಲ್ಲಿ ಸಂಘಕ್ಕೆ ‘ಎ’ ತರಗತಿ ಆಡಿಟ್ ವರ್ಗೀಕರಣ ದೊರೆತಿದ್ದು, ವರದಿ ಸಾಲಿನ ವಾರ್ಷಿಕ ವ್ಯವಹಾರ ರೂ. 413.41 ಕೋಟಿ ಆಗಿದೆ. ಆರಂಭದಲ್ಲಿ 4623 ‘ಎ’ ತರಗತಿ ಸದಸ್ಯರಿದ್ದು, ರೂ. 5.96 ಕೋಟಿ ರೂ. ಪಾಲುಬಂಡವಾಳವಿದ್ದು, ವರದಿ ವರ್ಷದಲ್ಲಿ 145 ಜನ ಸೇರ್ಪಡೆಯಾಗಿ ರೂ. 38.40 ಲಕ್ಷ ರೂ. ಜಮಾ ಬಂದಿರುತ್ತದೆ. ವರ್ಷಾಂತ್ಯಕ್ಕೆ 4714 ಸದಸ್ಯರಿದ್ದು, ರೂ. 6.03 ಕೋಟಿ ರೂ. ಪಾಲುಹಣವಿರುತ್ತದೆ. ‘ಡಿ’ ತರಗತಿ 692 ಜನ ಸದಸ್ಯರ 2.86 ಲಕ್ಷ ರೂ. ಪಾಲು ಬಂಡವಾಳವಿದೆ. ವರದಿ ಸಾಲಿನ ಆರಂಭಕ್ಕೆ 42.74 ಕೋಟಿ ರೂ. ವಿವಿಧ ಠೇವಣಿ ಇದ್ದು, ವರ್ಷದಲ್ಲಿ ರೂ. 270.59 ಲಕ್ಷ ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿದೆ. ಠೇವಣಿಗೆ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತಿದೆ. ಸದಸ್ಯರು ತಮ್ಮ ಉಳಿತಾಯವನ್ನು ಸಂಘದಲ್ಲಿಟ್ಟು ಸಹಕರಿಸಬೇಕಾಗಿ ವಿನಂತಿಸಿದರು.































 
 

ವರದಿ ವರ್ಷದ ಆರಂಭದಲ್ಲಿ ಸದಸ್ಯರ ಸಾಲ 72.43 ಕೋಟಿ ಹೊರಬಾಕಿ ಇದ್ದು, ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ, ಇತರ ಸಾಲಗಳಾಗಿ ರೂ 78.09 ಕೋಟಿ ರೂ. ವರ್ಷಾಂತ್ಯಕ್ಕೆ ಹೊರಬಾಕಿ ಸಾಲವಿದ್ದು, ಶೇ. 96.60 ವಸೂಲಾತಿಯಾಗಿರುತ್ತದೆ ಎಂದು ಹೇಳಿದರು.

ವರದಿ ಸಾಲಿನ ಅಂತ್ಯಕ್ಕೆ 127 ನವೋದಯ ಸ್ವ-ಸಹಾಯ ಗುಂಪುಗಳಿದ್ದು, ಈ ವರ್ಷ ರೂ. 9.15 ಲಕ್ಷ ರೂ. ಸಾಲ ನೀಡಲಾಗಿದೆ.

249 ಸದಸ್ಯರ ಪೈಕಿ 169 ಸದಸ್ಯರು ಹಸಿರು ಪಟ್ಟಿಗೆ ಬಂದಿದ್ದು, ಮೊಬಲಗು ಸರ್ಕಾರದಿಂದ ಬಿಡುಗಡೆಯಾಗಿರುವುದಿಲ್ಲ. 80 ಸದಸ್ಯರ ಹೆಸರು ಇನ್ನೂ ಹಸಿರು ಪಟ್ಟಿಗೆ ಸೇರಿರುವುದಿಲ್ಲ. ಈ ಬಗ್ಗೆ ಮಾನ್ಯ ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಲಕ್ಷ್ಮೀಶ ತೋಳ್ಳಾಡಿ, ಅವಿನಾಶ್‌ ಕೊಡಂಕಿರಿ, ತಿಮ್ಮಪ್ಪ ಹೆಗ್ಡೆ, ಕೃಷ್ಣಪ್ಪ ಪೂಜಾರಿ, ಎಲ್ಯಣ್ಣ ಪೂಜಾರಿ, ರಾಮಣ್ಣ ಮೂಲ್ಯ, ನಾಗರತ್ನ ಪಿ.ಆ‌ರ್., ಕೂಸಪ್ಪ ಗೌಡ, ಸೇಸಮ್ಮ, ಅದ್ರಾಮ ಬ್ಯಾರಿ, ನಾಗಪ್ಪ ಗೌಡ, ಕುಂಞ, ಗಿರಿಜಾ, ಯೋಗೀಶ್ ನ್ಯಾಕ್, ಪ್ರೇಮ, ವಸಂತ ಕುಮಾ‌ರ್, ಕೂಸಪ್ಪ ಗೌಡ, ಚಂದ್ರಶೇಖರ ನ್ಯಾಕ್, ನಾರಾಯಣ ಎಸ್.ಪಿ., ಕೃಷ್ಣ ಬೈಪಾಡಿತ್ತಾಯ, ಮಂಜುನಾಥ ಶೇಖ, ಬಾಲಕೃಷ್ಣ ಪ್ರಭುರವರನ್ನು ಮಹಾಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

 ನಿರ್ದೇಶಕರಾದ ಯಂ.ಪರಮೇಶ್ವರ ಭಂಡಾರಿ ಮಣಿಯ, ವಿ.ಬಾಬು ಶೆಟ್ಟಿ ವೀರಮಂಗಲ, ವಿಶ್ವನಾಥ ಬಲ್ಯಾಯ ಮುಂಡೋಡಿ, ಕೆ.ಪ್ರವೀಣ್ ಕುಮಾ‌ರ್ ಶೆಟ್ಟಿ, ನಮಿತ ನಾಕ್, ಜಯರಾಮ ಪೂಜಾರಿ ಒತ್ತೆಮುಂಡೂರು, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಜಿರೋಡಿ, ಬಿ.ಶಿವಪ್ರಸಾದ್ ನಾಯ್ಕ, ಚಂದ್ರ ಮಣಿಯ, ಜಿಲ್ಲಾ ಬ್ಯಾಂಕ್ ನ ಪ್ರತಿನಿಧಿ ವಸಂತ ಎಸ್‌. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯೆ ವಸಂತಿ ರೈ ಪ್ರಾರ್ಥಿಸಿದರು. ಅಧ್ಯಕ್ಷ ನವೀನ್ ಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಲೆಕ್ಕಪತ್ರ, ಆಯವ್ಯಯ ಮಂಡಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೆ ವರದಿ ವಾಚಿಸಿದರು. ಉಪಾಧ್ಯಕ್ಷೆ ಪವಿತ್ರಾ ಕೆ.ಪಿ. ವಂದಿಸಿದರು. ಸಿಬಂದಿಗಳಾದ ಜಯರಾಮ ಬಿ., ರೋಹಿತ್ ಪಿ., ಅಶ್ವಿತಾ ಎ, ರೇಷ್ಮಾ ಎಂ., ನಳಿನಿ ಬಿ.ಕೆ., ಮೇಘ, ಜಿತೇಶ್ ಯಸ್, ಶ್ರಾವ್ಯ ಎ ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top