ಎನ್ಐಎ ತನಿಖೆಗೆ ವಿಶ್ವ ಹಿಂದು ಪರಿಷತ್ ಆಗ್ರಹ
ಬೆಂಗಳೂರು : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಮುಸ್ಲಿಮರು ಕಲ್ಲುತೂರಿದ ಘಟನೆ ಪೂರ್ವ ಯೋಜಿತ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿವಬೆವೆ. ಜೊತೆಗೆ ಇದರಲ್ಲಿ ಕೇರಳದ ನಿಷೇಧಿತ ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಕೋಮುಗಲಭೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಬೇಕೆಂಬ ಕೂಗು ಕೇಳಿಬಂದಿದೆ.
ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಎಫ್ಐಆರ್ನಲ್ಲಿ ಉಲ್ಲೇಖವಾಗಿರುವ ಎರಡು ಹೆಸರುಗಳು ಕೇರಳದವರದ್ದಾಗಿದೆ. 74 ಆರೋಪಿಗಳ ಪೈಕಿ ಇಬ್ಬರು ಕೇರಳದವರಾಗಿದ್ದಾರೆ. 44ನೇ ಆರೋಪಿ ಯೂಸುಫ್ ಮತ್ತು 61ನೇ ಆರೋಪಿ ನಾಸೀರ್ ಇಬ್ಬರೂ ಕೇರಳದ ಮಲಪುರಂ ನಿವಾಸಿಗಳು ಎಂದು ತಿಳಿದುಬಂದಿದೆ.
ಈ ಆರೋಪಿಗಳಿಬ್ಬರೂ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆ ನಡೆದ ರೀತಿ ಸಂಪೂರ್ಣವಾಗಿ ಪೂರ್ವಯೋಜಿತ ಎಂಬುದನ್ನು ಸಾಬೀತುಪಡಿಸುತ್ತದೆ. ಪೆಟ್ರೋಲ್ ಬಾಂಬ್ ಬಳಕೆ ಮಾಡಲಾಗಿದ್ದು, ಇದು ಕೇರಳದಲ್ಲಿ ಮಾಮೂಲಾಗಿದೆ. ಗಲಾಟೆ ನಡೆದ ದಿನ ಮೆಡಿಕಲ್ನಲ್ಲಿ 200 ಮಾಸ್ಕ್ ಖರೀದಿ ಮಾಡಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನ ಎನ್ಐಎ ನಡೆಸಬೇಕು ಎಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.