ಪುತ್ತೂರು: ಬಿಜೆಪಿ ಕೆದಂಬಾಡಿ 186 ಬೂತ್ ಸಮಿತಿ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು
ಬೂತ್ ಅಧ್ಯಕ್ಷ ಸೀತಾರಾಮ ಗೌಡ ಅವರ ಅದ್ಯಕ್ಷತೆಯಲ್ಲಿ ಬಾಲಕೃಷ್ಣ ಎಂಬವರ ನಿವಾಸದಲ್ಲಿ ನಡೆಯಿತು.
ಬೂತ್ ಸದಸ್ಯತ್ವ ಅಬಿಯಾನದ ಸಂಯೋಜಕರಾಗಿ ನೇಮಿರಾಜ್ ರೈ ಕುರಿಕ್ಕಾರ, ಸಹ ಸಂಯೋಜಕರಾಗಿ ರಕ್ಷಿತ್ ಗೌಡ ಇದ್ಯಪ್ಪೆ ಆಯ್ಕೆಯಾದರು. ಬೂತ್ ಮನ್ ಕೀ ಬಾತ್ ಸಾಯೋಜಕರಾಗಿ ಸ್ವಸ್ತಿಕ್ ರೈ ಕುಯ್ಯಾರು ಅವರನ್ನು ನೇಮಿಸಲಾಯಿತು.
ಸಭೆಯಲ್ಲಿ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ. ಶಕ್ತಿಕೇಂದ್ರ ಸಂಚಾಲಕ ಶರತ್ ಗೌಡ ಶಕ್ತಿಕೇದ್ರ ಪೂರ್ವಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ತಾರಾನಾಥ ರೈ ಕುರಿಕ್ಕಾರ ಉದಯ ಇದ್ಯಪ್ಪೆ ಮೋಕ್ಷಿತ್ ಇದ್ಯಪ್ಪೆ ಮಹೇಶ್ ಇದ್ಯಪ್ಪೆ, ಸಂತೋಷ್ ಕುರಿಕ್ಕಾರ ಉಪಸ್ಥಿತರಿದ್ದರು. ಬೂತ್ ಕಾರ್ಯದರ್ಶಿ ಚಂದ್ರ ಇದ್ಪಾಡಿ ಸ್ವಾಗತಿಸಿ ವಂದಿಸಿದರು.
























