ತಾಲೂಕು ಮಟ್ಟದ ತ್ರೋಬಾಲ್ : ಅಂಬಿಕಾದ ವಿದ್ಯಾರ್ಥಿನಿಯರು ಪ್ರಥಮ

ಪುತ್ತೂರು: ಶಾಲಾ ಶಿಕ್ಷಣ (ಪದವಿ ಪೂರ್ವ) ಹಾಗೂ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಂಡವನ್ನು ದ್ವಿತೀಯ ಪಿಯುಸಿಯ ಅವನಿ ರೈ, ಮೇಘನಾ ವಿ ಎಚ್., ಪ್ರಥಮ ಪಿಯುಸಿಯ ವೈಶಾಲಿ ಕೆ, ರಿಯಾ ಜೆ ರೈ, ಯುಕ್ತ ವರ್ಷಿಣಿ, ಶ್ರೇಯಾ ವೈ, ಸಿಂಚನ ಎಂ, ಸಾನ್ವಿ ಆರ್, ಚರಿಷ್ಮ ಕೆ, ಅನನ್ಯ ರೈ, ಕೃಪಾಶ್ರೀ, ಪೂಜಾ ಮತ್ತು ಕೆ ಮುಕ್ತಾ ರೈ ಪ್ರತಿನಿಧಿಸಿದ್ದರು.

ತಂಡವನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top