ಚಿಕ್ಕಮಗಳೂರು: ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಚಾಕುವಿನಿಂದ ಇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ವರ್ಗಾವಣೆ ಸಂಬಂಧ ತಮ್ಮ ಕುಟುಂಬಸ್ಥರನ್ನು ಕರೆಸಿ ಬುದ್ದಿ ಹೇಳಿದ್ದಕ್ಕೆ ಕುಪಿತನಾದ ನೌಕರನೊಬ್ಬ ಈ ಕೃತ್ಯ ಎಸಗಿದ್ದಾನೆ.
ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಮೇಲೆ ಚಾಕುವಿನಿಂದ ಇರಿಯಲಾಗಿದೆ. ಜ್ಯೂನಿಯರ್ ಅಸಿಸ್ಟೆಂಟ್ ರಿತೇಶ್ ಏಕಾಏಕಿ ಚಾಕುವಿನಿಂದ ಚುಚ್ಚಿದ್ದಾನೆ.
ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಅವರ ಕೈ ಬೆರಳುಗಳಿಗೆ ಗಾಯಗಳಾಗಿದ್ದು ಸರ್ಕಾರಿ ಮಲ್ಲೆಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ನೌಕರ ರಿತೇಶ್ ನನ್ನು ಬಂಧಿಸಲಾಗಿದೆ.