ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಪ್ರಸ್ತುತ ವರ್ಷದಲ್ಲಿ 1.52 ಕೋಟಿ ರೂ. ಲಾಭ | ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್‍ ಪ್ರಶಸ್ತಿಗೆ ಬಾಜನ : ತಾರನಾಥ ಕಾಯರ್ಗ

ಸವಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2023-2024ನೇ ಸಾಲಿನಲ್ಲಿ ಸತತ 22 ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇಕಡಾ 99.22% ಸಾಲ ವಸೂಲಾತಿಯೊಂದಿಗೆ 1.52 ಕೋಟಿ ಲಾಭ ಗಳಿಸಿದ್ದು, ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್‍ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರು ಅವರು, ಸಂಘದಲ್ಲಿ 3451 ಸದಸ್ಯರಿದ್ದು, ರೂ. 5.52 ಕೋಟಿ ಪಾಲು ಬಂಡವಾಳ ಮತ್ತು ರೂ. 36.39 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ಕೃಷಿಯೇತರ ಸಾಲ, ಚಿನ್ನಾಭರಣ ಈಡಿನ ಸಾಲ, ಸ್ವಸಹಾಯ ಗುಂಪು ಸಾಲ, ಇತ್ಯಾದಿಗಳಿಗೆ ರೂ 55.41 ಕೋಟಿ ಸಾಲ ವಿತರಿಸಲಾಗಿದೆ. ಕೇಂದ್ರ ಬ್ಯಾಂಕಿನಿಂದ ರೂ. 30.69 ಕೋಟಿ ಸಾಲ ಪಡೆಯಲಾಗಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸುಮಾರು 20 ಸದಸ್ಯರಿಗೆ ತಲಾ ರೂ. 5000/-ದಂತೆ ರೂ.1,00,000 ವಿತರಿಸಲಾಗಿದೆ, ನವೋದಯದ ಚೈತನ್ನ ವಿಮಾ ಯೋಜನೆಯಡಿ 15ಸದಸ್ಯರಿಗೆ ರೂ. 88577/- ಕ್ರೈಂ ಬಂದಿರುತ್ತದೆ.































 
 

ಮಾಸ್ ಲಿ, ಮಂಗಳೂರು ಇವರ ಸಹಯೋಗದೊಂದಿಗೆ ರೈತರ ರೂ. 4.60 ಕೋಟಿ ಮೌಲ್ಯದ 1139,44 ಕ್ವಿಂಟಾಲ್ ಅಡಿಕೆ ಖರೀದಿಸಲಾಗಿದೆ, ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ರಸಗೊಬ್ಬರ ಮತ್ತು ರಾಜ್ಯ ಸರಕಾರಗಳ ಪಡಿತರ ವ್ಯವಸ್ಥೆಯನ್ನು 4 ಪಡಿತರ ಶಾಖೆಗಳಲ್ಲಿ ವಿತರಿಸಲಾಗುತ್ತಿದೆ.

1690 ಸದಸ್ಯರು ಹವಾಮಾನ ಆಧಾರತ ಬೆಳೆ ವಿಮಾ ಯೋಜನೆಗೆ ರೂ. 52.11 ಲಕ್ಷ ಪ್ರೀಮಿಯಂ ಪಾವತಿಸಿದ್ದಾರೆ. 819 ಕುಟುಂಬದ 3000 ಸದಸ್ಯರನ್ನು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ನೋಂದಾಯಿಸಲಾಗಿದೆ.

ಎಪ್ರಿಲ್ ನಿಂದ ಗ್ರಾಹಕರ ಅನುಕೂಲತೆಗಾಗಿ RTGS/NEFT ಸೌಲಭ್ಯ ಕಲ್ಪಿಸಲಾಗಿದೆ. ದಿನಾಂಕ 15.09.2024 ನೇ ರವಿವಾರ ಸಂಘದ ಮಹಾಸಭೆ ನಡೆಯಲಿದ್ದು ಪ್ರತಿ ವರ್ಷದಂತೆ ಈ ವರ್ಷ ಕೂಡ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರ ಮನೆಯ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಮತ್ತು ಡಿಗ್ರಿಯಲ್ಲಿ ಶೇಕಡಾ 80% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಗುವುದು. ಅನೇಕ ಪ್ರಶಸ್ತಿಗಳನ್ನು ಪಡೆದ ಪ್ರಸಿದ್ದ ನಾಟಿ ವೈದ್ಯ ಇಡ್ಯಾಡಿ ಎಾಸುದೇವ ಮತ್ತು ಕರ್ನಾಟಕ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಶಾರದ ಮಾಲೆತ್ತಾರು ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಮತ್ತು ನಿರ್ದೇಶಕರುಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ. ತಿಳಿಸಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top