ಪುತ್ತೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ದೊರೆತಿರುವ ಅರುಣ್ ಕುಮಾರ್ ಪುತ್ತಿಲ ಹಾಗೂ ಬೆಂಬಲಿಗರು ಬುಧವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಪ್ರಕರಣದ ಕುರಿತು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅರುಣ್ ಕುಮಾರ್ ಪುತ್ತಿಲ ಪುತ್ತೂರು ದೇವಸ್ಥಾನದ ವಠಾರಕ್ಕೆ ಆಗಮಿಸುತ್ತಿದ್ದಂತೆ ಆನೇಕ ಮಂದಿ ಆಗಮಿಸಿ ಶುಭ ಕೋರಿದರು.
ಇದೇ ಸಂದರ್ಭ ಪತ್ರಕರ್ತರಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಪ್ರಕರಣಕ್ಕೆ ಸಂಬಂಧಿಸಿ ಕಾಣದ ಕೈಗಳ ಷಡ್ಯಂತರ ಇದೆ. ಹಿಂದೆಯೂ ಈ ರೀತಿ ಆಗಿತ್ತು. ಅದರಿಂದ ಮುಕ್ತನಾಗಿ ಹೊರ ಬಂದಿದ್ದೇನೆ. ಈಗಲೂ ಆರೋಪಗಳಿಂದ ಮುಕ್ತನಾಗುತ್ತೇನೆ. ಕಷ್ಟಕಾಲದಲ್ಲಿ ತನ್ನೊಂದಿಗಿದ್ದ ಕಾರ್ಯಕರ್ತರಿಗೆ, ಬಿಜೆಪಿ ನಾಯಕರಿಗೆ, ಮಾಧ್ಯಮ ಮಿತ್ರರಿಗೆ ಧನ್ಯವಾದ ಸಲ್ಲಿಸಿದರು. ಬಳಿಕ ದೇವಸ್ಥಾನದ ಒಳಗಡೆ ತೆರಳಿ ದೇವರ ನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.