ಪುತ್ತೂರು: ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿ .ಪ್ರಾ ಶಾಲೆ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ/ಬಾಲಕಿಯರ ತ್ರೋಬಾಲ್ ಪಂದ್ಯಾಟ ಸುಳ್ಯಪದವು ಸರ್ವೋದಯ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಪಾಂಗ್ಲಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಈ ಪಂದ್ಯಾಟದಲ್ಲಿ ಉತ್ತಮ ಆಲ್ರೌಂಡರ್ ಆಗಿ ಬೆಥನಿಯ ಆದ್ಯಾ ಕೆ. ಪ್ರಶಸ್ತಿಯನ್ನು ಪಡೆದಿರುತ್ತಾರೆ.
ತಂಡದ ಆಟಗಾರರಾದ ಆದ್ಯಾ ಕೆ, ಹಿಮಾಶ್ರೀ, ಮುನವರ, ಶಾನ್ವಿ, ಸ್ನಿಗ್ಧಾ, ಜುಲ್ಫಾ, ಜೆರುಷ, ಸಮನ್ವಿ, ರೆಯ, ಮಿನ್ಹ, ನಜ, ವಿನ್ಯಾ ಮುಂತಾದವರು ಉತ್ತಮ ಪ್ರದರ್ಶನ ನೀಡಿದರು.
ಈ ತಂಡಕ್ಕೆ ಶಾಲಾ ದೈಹಿಕ ಶಿಕ್ಷಕರಾದ ನಿರಂಜನ್, ಅಕ್ಷಯ್ ರವರು ತರಬೇತಿ ನೀಡಿದ್ದು, ಶಾಲಾ ಶಿಕ್ಷಕಿ ಸಂಗೀತಾ ವ್ಯವ್ವಸ್ಥಾಪಕಿಯಾಗಿ ಸಹಕರಿಸಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಸೆಲಿನ್ ಪೆತ್ರಾ ರವರು ತಂಡಕ್ಕೆ ಶುಭ ಹಾರೈಸಿದ್ದಾರೆ
ಜಿಲ್ಲಾ ಮಟ್ಟದ ಪಂದ್ಯಾಟವು ಇದೇ ತಿಂಗಳ 18ರಂದು ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆಯ ಮೈದಾನದಲ್ಲಿ ನಡೆಯಲಿದೆ.