ಸುಲ್ತಾನ್ ಡೈಮಂಡ್ & ಗೋಲ್ಡ್ ನಲ್ಲಿ ವಿಶ್ವ ವಜ್ರ-ಡೈಮಂಡ್ ಎಕ್ಸಿಬಿಷನ್ ವಜ್ರಾಭರಣಗಳ ಪ್ರದರ್ಶನ ಮೇಳಕ್ಕೆ ಚಾಲನೆ

ಪುತ್ತೂರು: ಏಳ್ಳುಡಿಯ ತಾಜ್ ಟವರಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ – ಗೋಲ್ಡ್ ಮಳಿಗೆಯಲ್ಲಿ ಸೆ. 5ರಿಂದ 15ರ ತನಕ ನಡೆಯಲಿರುವ ವಿಶ್ವ ವಜ್ರ-ಡೈಮಂಡ್ ಎಕ್ಸಿಬಿಷನ್ ವಜ್ರಾಭರಣಗಳ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಲಾಯಿತು.

ಈ ಸುಲ್ತಾನ್ ಡೈಮಂಡ್ ಗೋಲ್ಡ್ ನ ವಜ್ರಾಭರಣಗಳ ಪ್ರದರ್ಶನವನ್ನು ವೈದ್ಯೆ ಡಾ.ಹಬೀನಾ ಶಾಯಿರಾ ಉದ್ಘಾಟಿಸಿ ಮಾತನಾಡಿ, ಸುಲ್ತಾನ್ ಮಳಿಗೆಯಲ್ಲಿ ಅಭರಣಗಳ ಸಾಕಷ್ಟು ಆಭರಣ ಸಂಗ್ರಹವಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ಸೇವೆಯೂ ಉತ್ತಮ ವಾಗಿದ್ದು, ಗ್ರಾಹಕರಿಗೆ ಸಂತೃಪ್ತಿಯನ್ನು ನೀಡುವಂತಿದೆ. ಮಳಿಗೆಯಲ್ಲಿನ ಎಲ್ಲರೂ ಪ್ರಶಂಸನೀಯ ಸೇವೆ ನೀಡುತ್ತಿದ್ದಾರೆ ಎಂದರು.

ಅತಿಥಿಗಳಾಗಿ ವಿಕ್ಟೋರಿಯಾ ರೋನಲ್ ಕ್ಲಬ್ ಸದಸ್ಯೆ ಆಶಾ ಡಿಸೋಜಾ, ಸುಶ್ಯಾವಿ ಜೈನ್ ವಿಜಯವನ, ಸುಮಯ್ಯ ನವಾಝ್ ಮತ್ತು ನಸ್ರತ್ ಬಶೀರ್, ಶಿಕ್ಷಕಿ ಇಂದಿರಾ ಭಂಡಾರಿ ಡೈಮಂಡ್ ಪ್ರದರ್ಶನದ ವಿವಿಧ ಸಂಗ್ರಹಗಳನ್ನು ಬಿಡುಗಡೆಗೊಳಿಸಿದರು.





























 
 

ಮಾತನಾಡಿದ ಆಶಾ ಡಿಸೋಜ, ನಾನು ಕಳೆದ 3 ವರ್ಷಗಳಿಂದ ಈ ಮಳಿಗೆಯಲ್ಲಿನ ಗ್ರಾಹಕಿ ಆಗಿದ್ದೇನೆ. ಇಲ್ಲಿ ಖರೀದಿಸಿದ ಚಿನ್ನಾಭರಣಗಳು ನನಗೆ ತೃಪ್ತಿ ನೀಡಿದೆ. ಗ್ರಾಹಕರು ಈ ಸಂಸ್ಥೆಗೆ ಹೆಚ್ಚಿನ ಬೆಂಬಲ ನೀಡ ಬೇಕು. ಆ ಮೂಲಕ ಸುಲ್ತಾನ್ ಗೋಲ್ಡ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.

ಪುತ್ತೂರು ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ.ಎಸ್. ಮುಸ್ತಫಾ ಕಕ್ಕಿಂಜೆ ಸ್ವಾಗತಿಸಿ, ಅತ್ಯಾಧು ನಿಕ ಶೈಲಿಯ ಬೃಹತ್ ಸಂಗ್ರಹದಲ್ಲಿ ಇಟಲಿ, ಫ್ರಾನ್ಸ್, ಅಮೇರಿಕಾ, ಬೆಲ್ಲಿಯಂ, ಸಿಂಗಾಪುರ, ಟರ್ಕಿ ಶೈಲಿಯ 4ಸಿ ಪರಿಪೂರ್ಣ ವಾದ ನೈಸರ್ಗಿಕ ವಜ್ರಾಭರಣಗಳ 10 ಸಾವಿರಕ್ಕೂ ಅಧಿಕ ಕ್ಯಾರೆಟ್‌ಗಳು ಲಭ್ಯವಿರಲಿದೆ. ಇದರಲ್ಲಿ ಪ್ರತೀ ಕ್ಯಾರೆಟ್ ಮೇಲೆ 8 ಸಾವಿರ ರೂ. ಡಿಸ್ಕೊಂಟ್ ನೀಡಲಾಗುತ್ತದೆ. ಸೆ.5ರಿಂದ ಸೆ.15ರ ವರೆಗೆ ನಡೆಯುವ ಈ ಬೃಹತ್ ವಿಶ್ವ ವಜ್ರ ಡೈಮಂಡ್ ಎಕ್‌ಸ್‌ಪೋ ವೀಕ್ಷಿಸಲು ಮತ್ತು ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ವಜ್ರಾಭರಣಗಳ ಬೃಹತ್ ಪ್ರದರ್ಶನದ ಸದುಪಯೋಗಪಡೆದುಕೊಳ್ಳುವಂತೆ ವಿನಂತಿಸಿದರು.

ಸಂಸ್ಥೆಯ ಗ್ರಾಹಕ ಪ್ರಮಖರಾದ ಆಶೆನ್ ಡಿಸೋಜ, ಜಾನ್ ಡಿಸೋಜ, ಶಿಕ್ಷಕಿ ಪ್ರಿಯಾ, ಸಂಸ್ಥೆಯ ಅಸಿಸ್ಟೆಂಟ್ ಮ್ಯಾನೇಜರ್ ಬಾಬು ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಅಮ್ರಾಝ್ ಮತ್ತಿತರರು ಉಪಸ್ಥಿತರಿದ್ದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top