ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರ ಮತ್ತು ಲಲಿತ ಕಲಾ ಸಂಘಗಳ ಜಂಟಿ ಆಶ್ರಯದಲ್ಲಿ ಭಾರತೀಯ ಶಾಸ್ತ್ರೀಯ ಕಲೆಗಳ ಅಂತರ್ಯಯವನ್ನು ಅರಿಯುವ ವಿನೂತನ ಕಾರ್ಯಕ್ರಮ ‘ಕಲಾಂತರಂಗ’ ಕಾಲೇಜಿನ ಪಿ.ಜಿ. ಸೆಮಿನಾರ್ ಹಾಲ್‌ನಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಕಲಾವಿದರಿಗೆ ಸಂಸ್ಕೃತಿ , ಸಾಹಿತ್ಯದ ವಿಸ್ತಾರಗಳು, ಪ್ರದರ್ಶನ ಕಲೆಗಳ ಮಹತ್ವದ ಕುರಿತು ಮಾರ್ಗದರ್ಶನ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದ ಮುಂಡಾಲಗುತ್ತು ಪ್ರಶಾಂತ್ ರೈ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನದ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶುಭ ಹಾರೈಸಿದರು. ಉಪಪ್ರಾಂಶುಪಾಲ ಡಾ.ವಿಜಯ ಕುಮಾರ್ ಮೊಳೆಯಾರ್ ಭಾವಗೀತೆ ತರಬೇತಿ ಕಾರ್ಯಕ್ರಮದ ಮಹತ್ವ ತಿಳಿಸಿದರು.
ಕಾಲೇಜಿನ ಲಲಿತ ಕಲಾ ಸಂಘದ ವಿದ್ಯಾರ್ಥಿಗಳಾದ ಮಹಿಮಾ ಮತ್ತು ಬಳಗ ಪ್ರಾರ್ಥಿಸಿದರು. ಸಂಘದ ಸಹಸಂಯೋಜಕಿ ತನುಜಾ ಎನ್.ಪಿ ಸ್ವಾಗತಿಸಿದರು. ಸಂಯೋಜಕಿ ಪೂಜಾಶ್ರೀ ವಿ.ರೈ ವಂದಿಸಿದರು. ಯಕ್ಷಾಮೃತಾ ಸರ್ಟಿಫಿಕೇಟ್ ಕೋರ್ಸ್ ನ ಸಂಯೋಜಕಿ ಸುರಕ್ಷಾ ಎಸ್. ಕಾರ್ಯಕ್ರಮ ನಿರೂಪಿಸಿದರು.