ಪುತ್ತೂರು: ಬಿಜೆಪಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶುಕ್ರವಾರ ಜೈನಭವನದಲ್ಲಿ ಚಾಲನೆ ನೀಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಚಾಲನೆ ನೀಡಿ ಮಾತನಾಡಿ, ತಾಳ್ಮೆಯಿಂದ ಸಂಘಟನಾತ್ಮಕ ಕೆಲಸ ಮಾಡಿದಾಗ ಉತ್ತಮ ಫಲಿತಾಂಶ ಬರುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಕ್ಷೇತ್ರ ಜಿಲ್ಲೆಯಲ್ಲಿ ಕೊಟ್ಟ ಎಲ್ಲಾ ಕೆಲಸವನ್ನು ಸಂಘಟನಾತ್ಮಕವಾಗಿ ಮಾಡಲಾಗಿದೆ ಎಂದ ಅವರು, ಬಿಜೆಪಿಯಲ್ಲಿ ಒಂದು ಸಲ ಪದಾಧಿಕಾರಿಗಳನ್ನು ನೇಮಕ ಮಾಡಿದ ಬಳಿಕ ಗೊಂದಲ ಬೇಡ. ಒಂದು ಸಲ ಮಾಡಿದ ನಿರ್ಧಾರಕ್ಕೆ ಎಲ್ಲರು ಬದ್ಧರಾಗಿರಬೇಕು. ಬಿಜೆಪಿ ಬಿಟ್ಟು ನಮ್ಮಲ್ಲಿ ಬೇರೆ ಆಲೋಚನೆ ಮಾಡಬಾರದು. ಹಿರಿಯರ ಮಾರ್ಗದರ್ಶನವನ್ನು ಪಡೆದು ಅವರ ವಿಶ್ವಾಸ ಪಡೆಯಬೇಕು. 57 ಮಹಾಶಕ್ತಿ ಕೇಂದ್ರಕ್ಕೆ ಜವಾಬ್ದಾರಿ ಕೊಡುವಾಗ ಹುಡುಕಿ ಕೊಟ್ಟಿದ್ದೇವೆ. ರಾಜಕೀಯ ವ್ಯವಸ್ಥೆಯ ಮಧ್ಯೆ ಸದಸ್ಯತ್ವ ಅಭಿಯಾನ ಕೈಗೊಂಡಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಸದಸ್ಯತ್ವ ಅಭಿಯಾನದ ಜಿಲ್ಲೆಯ ಸಂಯೋಜಕ ವಿಕಾಸ್ ಪುತ್ತೂರು, ಸಂಚಾಲಕ ಯತೀಶ್ ಆರುವಾರು, ಜಿಲ್ಲಾ ಪರಿಶಿಷ್ಟ ಮೋರ್ಚ ಅಧ್ಯಕ್ಷ ಹರೀಶ್ ಬಿಜತ್ರೆ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್. ಸಿ. ನಾರಾಯಣ, ಪ್ರಭಾರಿ ಸುನಿಲ್ ದಡ್ಡು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಉಮೇಶ್ ಕೋಡಿಬೈಲು, ಗೋಪಾಲಕೃಷ್ಣ ಹೇರಳೆ, ನಿತೀಶ್ ಕುಮಾರ್ ಶಾಂತಿವನ, ಸಹಿತ ಹಲಾವರು ಮಂದಿ ಉಪಸ್ಥಿತರಿದ್ದರು. ಹರಿಪುಸಾದ್ ಯಾದವ್, ಯುವರಾಜ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜೆರೆಮಾರು ಅವರು ಉಪ್ಪಿನಂಗಡಿ, ಬೆಳ್ಳಿವಾಡಿ, ನೆಕ್ಕಿಲಾಡಿ, ಬಜತ್ತೂರು, ಹಿರೇಬಂಡಾಡಿ, ಆರ್ಯಾಪು, ಬನ್ನೂರು, ಪಡೂರು, ಚಿಕ್ಕಮುಡ್ಡರಯ, ಬೆಟ್ಟಂಪಾಡಿ, ಇರ್ದೆ, ಕುರಿಯ, ಪಾಣಾಜೆ, ನರಿಮೊಗರು, ಶಾಂತಿಗೋಡು, ಸರ್ವೆ, ಮುಂಡೂರು, ಕೆಮ್ಮಿಂಜಿ, ಕೆದಂಬಾಡಿ, ಕೆಯೂರು, ಒಳಮೊಗ್ರು ಸಹಿತ ಹಲವು ಮಹಾ ಶಕ್ತಿಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಪ್ರಮುಖರ ಘೋಷಣೆ ಮಾಡಿದರು