ಅಕ್ರಮ ಕಸಾಯಿಖಾನೆಗೆ ಕಡಬ ಪೊಲೀಸರಿಂದ ದಾಳಿ | 70 ಕೆ.ಜಿ. ಗೋಮಾಂಸ ಪತ್ತೆ

ಕಡಬ: ಮನೆಯೊಂದರಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದ ಕಡಬ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ಕಡಬ ತಾಲೂಕಿನ ಕಾಯರ್ತಡ್ದದಲ್ಲಿ ನಡೆದಿದೆ.

ಕಡಬದ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಕಾಯರ್ತಡ್ಕ ಸಮೀಪದ ಮನೆಯೊಂದರಲ್ಲಿ ಜಾನುವಾರು ವಧೆ ಮಾಡುತ್ತಿರುವ ಕುರಿತು ಬಜರಂಗದಳಕ್ಕೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಿದ ಮೇರೆಗೆ ಕಡಬ ಠಾಣಾ ಎಸ್.ಐ. ನೇತೃತ್ವದ ಪೊಲೀಸರು ದಾಳಿ ಮಾಡಿದ್ದು, ಗೋವಧೆ ಮಾಡಲು ಬಳಸಿದ ಸಾಧನ, ದನದ ತಲೆ, ಸುಮಾರು 70 ಕೆಜಿಯಷ್ಟು ಮಾಂಸ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿನೋಯ್ ಮತ್ತು ಕುಟ್ಟಪ್ಪನ್ ಎಂಬವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top