ಮುಂಬಯಿ : ಗಗನಚುಂಬಿ ವಾಣಿಜ್ಯ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ

ಮುಂಬಯಿ : ಮುಂಬಯಿಯ ಗಗನಚುಂಬಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ಇಂದು ಬೆಳಗ್ಗೆ ಭಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ಮುಂಬಯಿಯ ಲೋವರ್‌ ಪರೇಲ್‌ನ ಕಮಲಾ ಮಿಲ್‌ ಕಂಪೌಂಡ್‌ನಲ್ಲಿರುವ ಟೈಮ್ಸ್‌ ಸ್ಕ್ವೇರ್‌ ಬಿಲ್ಡಿಂಗ್‌ನಲ್ಲಿ ಈ ಅವಘಡ ಸಂಭವಿಸಿದೆ.


ಬೆಳಗ್ಗೆ ಸುಮಾರು 6.30ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, 10ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.


ಅವಘಡ ಬಹಳ ದೊಡ್ಡದಿದೆ. ಬೆಂಕಿ ಉಂಟಾಗಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಸಾವುನೋವು ಇನ್ನಷ್ಟೇ ತಿಳಿದು ಬರಬೇಕು. ವಾಣಿಜ್ಯ ಸಂಕೀರ್ಣವಾದ ಕಾರಣ ಕಟ್ಟಡದಲ್ಲಿ ಹೆಚ್ಚು ಮಂದಿ ಇಷ್ಟು ಬೆಳಗ್ಗೆ ಇರುವ ಸಾಧ್ಯತೆ ಕಡಿಮೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top