ಕಡಬ: ಕೂಲಿ ಕಾರ್ಮಿಕರೊಬ್ಬರು ನೀರು ತುಂಬಿದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನೂಜಿಬಾಳ್ತಿಲ ಗ್ರಾಮದ ಪೇರಡ್ಕದಲ್ಲಿನಡೆದಿದೆ.
ಮೀನಾಡಿ ಸಮೀಪದ ದೋಳ ನಿವಾಸಿ ಉಮೇಶ (35) ಮೃತಪಟ್ಟವರು
ಕೂಲಿ ಕಾರ್ಮಿಕರಾಗಿದ್ದ ಉಮೇಶ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ನಿನ್ನೆ ಸಂಜೆ ವೇಳೆ ಒಂದು ಕಿ.ಮೀ. ದೂರದ ಪೇರಡ್ಕ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ