ರೂಮಿನಲ್ಲಿ ಕೂಡಿ ಹಾಕಿ ಡ್ರಗ್ಸ್‌ ನೀಡಿ ಅತ್ಯಾಚಾರ : ಮಲಯಾಳಂ ಹೀರೊ ನಿವಿನ್‌ ಪೌಲಿ ವಿರುದ್ಧ ದೂರು

ಕೊಚ್ಚಿ: ಮಲಯಾಳಂನ ಬೆಂಗಳೂರು ಡೇಸ್, ಪ್ರೇಮಂ ಮೊದಲಾದ ಹಿಟ್ ಸಿನೆಮಾಗಳ ನಾಯಕ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಸಿನೆಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಎರ್ನಾಕುಳಂ ಜಿಲ್ಲೆಯ ನೇರ್ಯಮಂಗಲಂ ನಿವಾಸಿ ಯುವತಿ ಉನ್ನುಕ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಈ ಪ್ರಕರಣ ಇಂತಹ ಪ್ರಕರಣಗಳ ತನಿಖೆಗೆ ರಚಿಸಲಾಗಿರುವ ಎಸ್‌ಐಟಿಗೆ ವರ್ಗಾವಣೆಯಾಗಿದೆ. ಹೇಮಾ ಕಮಿಷನ್ ವರದಿ ಬಹಿರಂಗಗೊಂಡ ಬಳಿಕ ತನಿಖೆಗೆ ನೇಮಕಗೊಂಡ ವಿಶೇಷ ತನಿಖಾ ತಂಡ ಈ ಪ್ರಕರಣದ ವಿಚಾರಣೆ ನಡೆಸಲಿದೆ. ವರದಿ ಬಹಿರಂಗವಾದ ಬಳಿಕ ಇದುವರೆಗೆ 11 ಪ್ರಕರಣ ದಾಖಲಾಗಿದೆ.


ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ನಿವಿನ್ ಪೌಲಿ 6ನೇ ಆರೋಪಿಯಾಗಿದ್ದಾರೆ. 2023ರ ನವೆಂಬರ್‌ನಲ್ಲಿ ದುಬೈಯ ಹೋಟೆಲೊಂದರಲ್ಲಿ ಈ ಘಟನೆ ನಡೆದಿದೆ. ದೂರು ನೀಡಿದ ಯುವತಿ ಬೇರೆ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದರು. ಸ್ನೇಹಿತೆ ಮೂಲಕ ಈಕೆ ಚಿತ್ರ ತಂಡದ ಬಳಿಗೆ ತೆರಳಿದ್ದರು ಎನ್ನಲಾಗಿದೆ.


ಯುವತಿ ತನ್ನನ್ನು ಕರೆದೊಯ್ದ ಮಹಿಳೆಯನ್ನು ಮೊದಲ ಆರೋಪಿ ಎಂದು ದೂರಿನಲ್ಲಿ ಹೇಳಿದ್ದಾರೆ. ಎ.ಕೆ ಸುನಿಲ್, ಬಿನು, ಬಶೀರ್, ಕುಟ್ಟನ್ ಹಾಗೂ 6ನೇ ಆರೋಪಿ ನಿವಿನ್ ಪೌಲಿ ಎಂದು ದೂರು ದಾಖಲಿಸಿದ್ದಾರೆ. ಮಾದಕದ್ರವ್ಯ ನೀಡಿ ದೌರ್ಜನ್ಯ ನಡೆಸಿದ್ದಾರೆ. 6 ದಿನಗಳ ಕಾಲ ಹೋಟೆಲ್‌ನಲ್ಲಿ ಕೂಡಿ ಹಾಕಿ ಈ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top