ಪ್ಯಾರಾಲಿಂಪಿಕ್ಸ್‌: ಟೋಕಿಯೊ ಸಾಧನೆ ಮೀರಿ ಮುನ್ನಡೆದ ಭಾರತ

ಭಾರತೀಯರಿಗೆ 3 ಚಿನ್ನದೊಂದಿಗೆ 20 ಪದಕಗಳ ಸಿಂಗಾರ

ಪ್ಯಾರಿಸ್: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅತ್ಯುತ್ತಮ ಸಾಧನೆ ಮೆರೆದಿದೆ. ಪದಕ ಬೇಟೆಯಲ್ಲಿ ಭಾರತೀಯರು ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ ಸಾಧನೆಯನ್ನು ಮೀರಿ ಮುನ್ನಡೆದಿದ್ದಾರೆ. ಚಿನ್ನದಿಂದಲೇ ಪದಕ ಬೇಟೆ ಆರಂಭಿಸಿದ ಭಾರತದ ಅದ್ಭುತ ಪ್ರದರ್ಶನದೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಮಂಗಳವಾರ ಒಂದೇ ದಿನ 5 ಪದಕ ಗೆದ್ದಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಭಾರತ ಪದಕಗಳ ಸಂಖ್ಯೆ 20ಕ್ಕೇರಿದೆ. ಈ ಮೂಲಕ ಟೋಕಿಯೊ ಕ್ರೀಡಾಕೂಟದಲ್ಲಿ ಗೆದ್ದಿದ್ದ 19 ಪದಕಗಳ ದಾಖಲೆ ಮುರಿದಿದೆ.

ಮಂಗಳವಾರ ಭಾರತಕ್ಕೆ ಅಥ್ಲೆಟಿಕ್ಸ್‌ನ ಜಾವಲಿನ್ ಎಸೆತದಲ್ಲಿ 2, ಹೈ ಜಂಪ್‌ನಲ್ಲಿ 2 ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ 1 ಪದಕ ಲಭಿಸಿತು. ಭಾರತ ಒಟ್ಟು 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚು ಜಯಿಸಿದೆ. ಟೋಕಿಯೋದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿತ್ತು. ಈ ಬಾರಿ ಕ್ರೀಡಾಕೂಟದಲ್ಲಿ ಇನ್ನೂ 4 ದಿನ ಬಾಕಿ ಇದ್ದು, ಭಾರತ ಮತ್ತಷ್ಟು ಪದಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.
2020ರಲ್ಲಿ ನಡೆದ ಟೋಕಿಐೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಇಲ್ಲಿ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳೊಂದಿಗೆ ಭಾರತೀಯರು ಒಟ್ಟು 19 ಪದಕಗಳನ್ನು ಗೆದ್ದಿದ್ದರು. ಆದರೆ ಈ ಬಾರಿ ಈಗಾಗಲೇ 20 ಪದಕಗಳನ್ನು ಗೆಲ್ಲುವಲ್ಲಿ ಭಾರತೀಯ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ. ಈ ಬಾರಿ 84 ಕ್ರೀಡಾಪಟುಗಳು ಭಾಗವಹಿಸಿರುವುದರಿಂದ ಭಾರತವು ಇನ್ನಷ್ಟು ಪದಕಗಳ ನಿರೀಕ್ಷೆಯಲ್ಲಿದೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top