ಪುತ್ತೂರು: ಮುಳಿಯ ಚಿನ್ನಾಭರಣ ಮಳಿಗೆ ಕಳೆದ 80 ವರ್ಷಗಳಿಂದ ನಂಬಿಕೆಯ ಆಭರಣ ಮಳಿಗೆಯಾಗಿರುತ್ತದೆ.
ಹಾಗೆಯೇ ಸ್ಥಳೀಯರಿಗೆ ಅವಕಾಶಕ್ಕಾಗಿ ಗಾನರಥ ಗಾಯನ ಸ್ಪರ್ಧೆ, ಕೃಷಿಯನ್ನುಉದ್ಯಮವಾಗಿ ನೋಡಬೇಕು ಅನ್ನುವ ಕೃಷಿಕೋದ್ಯಮ ಸೆಮಿನಾರ್, ಕಾಡು ಬೆಳೆಸಲು ಲಕ್ಷಕ್ಕೂ ಮಿಕ್ಕಿ ಸೀಡ್ ಬಾಲ್ ಎಸೆತ, ದೇಶದಲ್ಲೇ ಮೊದಲ ಬಾರಿ ಸ್ವಚ್ಛ ಪುತ್ತೂರು ಕಾರ್ಯಕ್ರಮ ಹೀಗೆ ಸದಾ ಹಲವು ಹೊಸತನವನ್ನು ಪರಿಚಯಿಸುವ ಕೆಲಸ ಮಾಡಿಕೊಂಡು ಬಂದಿದೆ. ಈ ಹೊಸತನಕ್ಕೆ ಈಗ ಇನ್ನೊಂದು ಆಯಾಮವೇ ಫೇಸಸ್ ಆಫ್ ಮುಳಿಯ
ನಮ್ಮ ಶಾಖೆಗಗಳಿರುವ ಕೊಡಗು ಪುತ್ತೂರು ಬೆಳ್ತಂಗಡಿ ಬೆಂಗಳೂರು ಸುತ್ತ ಇರುವ ಮಾಡೆಲಿಂಗ್ ಆಸಕ್ತ ರೂಪಸಿಯರನ್ನು ಆಯ್ಕೆ ಮಾಡಿ, ಅವರಿಗೆ ನಮ್ಮ ವೈವಿಧ್ಯಮಯ ಆಭರಣಗಳನ್ನು ತೊಡಿಸಿ ವೃತ್ತಿಪರ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಶೂಟಿಂಗ್ ಮಾಡಿ ಅದರಲ್ಲಿ ಉತ್ತಮವಾದದ್ದನ್ನು ಮತ್ತೆ ಪುನಃ ಆಯ್ಕೆ ಮಾಡಿ ಮುಳಿಯ ಮಾಡೆಲ್ ಗಳಾಗಿ ಪರಿಚಯಿಸುವ ಮೂಲಕ ಮಾಡೇಲಿಂಗ್ ಉದ್ಯಮದಲ್ಲಿ ಅವರನ್ನು ಬೆಳೆಸುವುದು ಉದ್ದೇಶವಾಗಿದೆ.
ಈ ವಿನೂತನ ಕಾರ್ಯಕ್ರಮದಲ್ಲಿ 800 ಕ್ಕೂ ಅಧಿಕ ಯುವಕ- ಯುವತಿಯರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 150 ಜನರನ್ನು ನಾವು ಈಗಾಗಲೇ ಆಯ್ಕೆ ಮಾಡಿ ಅವರ ಪ್ರೊಫೈಲ್ ಶೂಟ್ ಮಾಡಿ ಆಗಿರುತ್ತದೆ. ಇವು ನಮ್ಮ ಯೂಟ್ಯೂಬ್ ಚಾನೆಲ್ ಗಳಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಈಗಾಗಲೇ ಜನ ಮೆಚ್ಚುಗೆ ಪಡೆದಿದೆ.
ಇವರಲ್ಲಿ ಹಲವಾರು ರೂಪದರ್ಶಿಗಳು ನಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರೀಲ್ ಗಳ ಮೂಲಕ ಜನಪ್ರಿಯರಾಗಿ ಲೈಕ್ ಗಳನ್ನು ಪಡೆದಿದ್ದಾರೆ.
ಫೇಸಸ್ ಆಫ್ ಮುಳಿಯ ಬಗ್ಗೆ ಮಾತನಾಡಿದ ಮಾನಸ ಮಾಡೆಲ್ ” ಇದು ನನಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಹೆಜ್ಜೆ ಇಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ” ಎನ್ನುತ್ತಾರೆ.
“ಮುಳಿಯದವರ ಈ ಕಾರ್ಯಕ್ರಮ ನನಗೆ ಮಾಡೆಲಿಂಗ್ ಮಾಡುವ ಕಾನ್ಫಿಡೆಂಟ್ ನೀಡಿದೆ” ಎನ್ನುತ್ತಾರೆ ಇನ್ನೋರ್ವ ರೂಪದರ್ಶಿ ಮಹಾಲಸ ಪೈ
“ನನ್ನ ಮಗಳು ಫೇಸಸ್ ಆಫ್ ಮುಳಿಯ ಚಿನ್ನಾಭರಣಗಳೊಂದಿಗೆ ತುಂಬಾ ಚೆನ್ನಾಗಿ ಕಾಣುತ್ತಾಳೆ” ಎನ್ನುತ್ತಾರೆ ಆಮೇಚೂರ್ ಮಾಡೆಲ್ ಅಮ್ಮ ಅನುರಾಧ ಪುತ್ತೂರು.
ಫೇಸಸ್ ಆಫ್ ಮುಳಿಯ ಒಂದು ವಿನೂತನ ಪ್ರಯೋಗವಾಗಿದ್ದು ಮಹಿಳೆಯರ ಸೌಂದರ್ಯ ಪ್ರಜ್ಞೆಯನ್ನು ಆಭರಣಗಳೊಂದಿಗೆ ಸಂಭ್ರಮಿಸುವ ಉದ್ದೇಶದಾಗಿದೆ. ಇದು ಈಗಾಗಲೇ ಜನಪ್ರಿಯವೂ ಆಗಿದೆ. ಇಲ್ಲಿ ಆಯ್ಕೆಯಾದ 15- 20 ಮಾಡೆಲ್ ಗಳನ್ನ ಸಿನಿಮಾ ಪತ್ರಿಕೆಗಳ ಮೂಲಕ, ನಮ್ಮ ಜಾಹೀರಾತು ಮೂಲಕ, ಮುಳಿಯ ಸೋಷಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯಿಸಲಾಗುವುದು. ಇದರಿಂದಾಗಿ ಅವರ ಮುಂದಿನ ಮೋಡಲಿಂಗ್ ಅವಕಾಶ ಉಜ್ವಲ ಹೊಸ ಅವಕಾಶದ ಕಡೆಗೆ ಮುಂದುವರೆಯಲಿ ಎನ್ನುವುದೇ ನಮ್ಮ ಉದ್ದೇಶ. ಇದರಲ್ಲಿ ಭಾಗವಹಿಸಿದ ಹೆಚ್ಚಿನವರ ಭಾವಚಿತ್ರಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ.
ಮುಂದಿನ ಸಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಮುಳಿಯ ಮಳಿಗೆಯಲ್ಲಿ ನಡೆಯುವ ಡೈಮಂಡ್ ಫೆಸ್ಟ್ ಮತ್ತು ಚಿನ್ನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಫೇಸಸ್ ಆಫ್ ಮುಳಿಯ ದಲ್ಲಿ ಆಯ್ಕೆಯಾದವರನ್ನು ಆಹ್ವಾನಿಸಿ ಫ್ಯಾಶನ್ ಶೋ ಮಾಡಲಾಗುವುದು
“ಒಟ್ಟು 150 ಫೋಟೋಗಳಲ್ಲಿ 20 ಜನರನ್ನು ಆಯ್ಕೆ ಮಾಡಲಾಗುವುದು .ಈ ಆಯ್ಕೆಯನ್ನು ಮಾಡೆಲ್ ಕ್ಷೇತ್ರದ ನುರಿತ ಅನುಭವಿಗಳ ತಂಡವನ್ನು ರಚಿಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು” ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.