ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮೆಲ್ವಿನ್ ಮಸ್ಕರೇನಸ್ (57) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಕಿನ್ನಿಗೋಳಿಯ ಸಹೋದರಿಯ ಮನೆಯಲ್ಲಿ ಮಂಗಳವಾರ ರಾತ್ರಿ ನಿಧನ ಹೊಂದಿದರು.
ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಅವರು ಅನಾರೋಗ್ಯ ನಿಮಿತ್ತ ಊರಿಗೆ ವಾಪಾಸಾಗಿದ್ದರು. ನೆಲ್ಲಿಕಟ್ಟೆ ಮಿತ್ರವೃಂದದ ಸಕ್ರೀಯ ಸದಸ್ಯರಾಗಿದ್ದ ಇವರು, ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿಹಾಗೂ ಮಕ್ಕಳನ್ನು ಅಗಲಿದ್ದಾರೆ.