ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಆ.30 ರಿಂದ ಸೆ.26ರ ತನಕ ನಡೆಯಲಿರುವ `ಡೈಮಂಡ್ ಫೆಸ್ಟ್’ನ ಎರಡನೇ ಆವೃತ್ತಿಗೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ಡೈಮಂಡ್ ಫೆಸ್ಟ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮುಳಿಯದ ಡೈಮಂಡ್ ಫೆಸ್ಟ್‌ನಲ್ಲಿ ಕನಿಷ್ಠ ಬೆಲೆಯಲ್ಲಿ ಖರೀದಿಸಬಹುದಾದ ಆಭರಣಗಳಿದ್ದು ಜನ ಸಾಮಾನ್ಯರಿಗೂ ಖರಿದಿಸಬಹುದು. ಉತ್ತಮ ವೆರಾಟಿ, ಆಕರ್ಷಕ ವಿನ್ಯಾಸಗಳ ಆಭರಣಗಳು ಉತ್ತಮ ಬೆಲೆಯಲ್ಲಿ ಆಕರ್ಷಕ ಕೊಡುಗೆಗಳೊಂದಿಗೆ ಗ್ರಾಹಕರು ಖರೀದಿಸಬಹುದು. ಮುಳಿಯ ಜ್ಯುವೆಲ್ಸ್ ಕರ್ನಾಟಕದ ವಿವಿಧ ಕಡೆಗಳಲ್ಲಿ ಮಳಿಗೆಗಳನ್ನು ಹೊಂದಿದ್ದು ಇನ್ನು ಮುಂದೆ ಹೊರ ರಾಜ್ಯಗಳಲ್ಲಿಯೂ ಮಳಿಗೆಗಳನ್ನು ತೆರೆಯುವಂತಾಗಲಿ ಎಂದರು.
ಮುಖ್ಯ ಅತಿಥಿ ಡ್ಯಾಶ್ ಮಾರ್ಕೆಟಿಂಗ್‌ನ ಮುಖ್ಯಸ್ಥೆ ನಳಿನಿ ಶೆಟ್ಟಿ ಮಾತನಾಡಿ, ಮುಳಿಯ ಜ್ಯುವೆಲ್ಸ್‌ನಲ್ಲಿ ಗುಣಮಟ್ಟದ ಆಭರಣಗಳೊಂದಿಗೆ ಗ್ರಾಹಕರಿಗೆ ಮನಮುಟ್ಟುವಂತ ಆಕರ್ಷಕ ವಿನ್ಯಾಸಗಳ ಆಯ್ಕೆಗಳಿವೆ ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ಚಿನ್ನಾಭರಗಳಲ್ಲಿ ಹೊಸತನಗಳನ್ನು ಪರಿಚಯಿಸಿರುವ ಮುಳಿಯ ಜ್ಯುವೆಲ್ಸ್ ಗ್ರಾಹಕರಿಗೆ ಕೈಗೆಟಕುವ ದರದ ಆಭರಣಗಳು ಲಭ್ಯವಿದೆ. 7 ಸಾವಿರದಿಂದ ಪ್ರಾರಂಭಿಸಿದ ವಜ್ರದ ಆಭರಣಗಳು ಫೆಸ್ಟ್‌ನಲ್ಲಿ ಲಭ್ಯವಿದೆ. ಮುಂಬಯಿಂದ ನಾವೇ ಖರೀದಿಸಿದ ಗ್ರಾಹಕರ ಮನಮುಟ್ಟುವಂತ ವೆರಾಟಿ, ವಿನ್ಯಾಸದ ವಜ್ರಗಳು ಆಭರಣಗಳು ಫೆಸ್ಟ್‌ನಲ್ಲಿ ಲಭ್ಯವಿದೆ ಎಂದರು.
ಡೈಮಂಡ್ ಫೆಸ್ಟ್ ನ ಎರಡನೇ ಆವೃತ್ತಿಯ ಪ್ರಥಮ ಗ್ರಾಹಕಿ ನಿವೃತ್ತ ಶಿಕ್ಷಕಿ ಸುನೀತಾ ಕಾವಳಮುಡೂರುರವರಿಗೆ ಕಾರ್ಯಕ್ರಮದಲ್ಲಿ ವಜ್ರದ ಆಭರಣವನ್ನು ಹಸ್ತಾಂತರಿಸಲಾಯಿತು. ಮುಳಿಯ ಜ್ಯುವೆಲ್ಸ್‌ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಿವಕೃಷ್ಣಮೂರ್ತಿ, ಪ್ರಬಂಧಕ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರಾರ್ಥಿಸಿದರು. ಕಾರ್ಯನಿರ್ವಹಕ ಅಧಿಕಾರಿ ಯತೀಶ್ ಸ್ವಾಗತಿಸಿದರು. ಫ್ಲೋರ್ ಮ್ಯಾನೇಜರ್ ಗಳಾದ ಪ್ರವೀಣ್ ಕಾರ್ಯಕ್ರಮ ನಿರೂಪಿಸಿ, ಆನಂದ ಕುಲಾಲ್ ವಂದಿಸಿದರು.