‘ಐ ಲವ್ ಯೂ’ ಹೇಳಿದರೆ ಮಾತ್ರ ರಿಚಾರ್ಚ್ | ವಿದ್ಯಾರ್ಥಿನಿಯರಿಂದ ಅಂಗಡಿಯಾತನಿಗೆ ಹಿಗ್ಗಾಮುಗ್ಗ ಥಳಿತ

ರಾಜಸ್ಥಾನ: ಮೊಬೈಲ್ ರಿಚಾರ್ಚ್ ಮಾಡಲು ಮೊಬೈಲ್ ಅಂಗಡಿಗೆ ಬಂದ ಶಾಲಾ ವಿದ್ಯಾರ್ಥಿನಿಯರಿಗೆ ಮೊಬೈಲ್ ಅಂಗಡಿಯಾತ ‘ಐ ಲವ್ ಯೂ’ ಎಂದು ಹೇಳಿದರೆ ಮಾತ್ರ ರೀಚಾರ್ಚ್‍ ಮಾಡುವುದು ಹೇಳಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿನಿಯರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ರಾಜಸ್ಥಾನದ ದಿದ್ಯಾನಾ ಎಂಬಲ್ಲಿ ನಡೆದಿದೆ.

ಈ ಕುರಿತು ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಹುಡುಗೀರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಂದಷ್ಟು ಸ್ಕೂಲ್ ಹುಡೀರು ಐ ಲವ್ ಯು ಹೇಳುವಂತೆ ಪೀಡಿಸಿದಾತನಿಗೆ ನಡು ರಸ್ತೆಯಲ್ಲಿಯೇ ಚಳಿ ಬಿಡಿಸಿದ್ದಾರೆ.

ಸ್ಕೂಲ್ ಹುಡುಗೀರು ಮೊಬೈಲ್ ರೀಚಾರ್ಜ್ ಮಾಡಿಸಲೆಂದು ಮೊಬೈಲ್ ಶಾಪ್‌ ಗೆ ಹೋಗಿದ್ದಾರೆ. ಆದ್ರೆ ಅಂಗಡಿ ಮಾಲೀಕ ಐ ಲವ್ ಯು ಹೇಳಿದ್ರೆ ಮಾತ್ರ ಮೊಬೈಲ್ ರೀಚಾರ್ಜ್ ಮಾಡಿಕೊಡುವುದಾಗಿ ಅವರನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ಹುಡುಗೀರು, ಆತನನನ್ನು ದರದರನೇ ನಡು ರಸ್ತೆಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲಿಯೇ ಆತನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top