ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ತೆಂಗು ಕೃಷಿ ತರಬೇತಿ

ಪುತ್ತೂರು: ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ತೆಂಗು ಕೃಷಿ ತರಬೇತಿ ಕಾರ್ಯಕ್ರಮ ರಾಮಕುಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ಕೃಷಿ ವಿಜ್ಞಾನ ಕೇಂದ್ರ, ಕಾಸರಗೋಡು ಸಿ.ಪಿ.ಸಿ.ಆರ್.ಐ  ಕಾಸರಗೋಡು, ಡೇ-ಎನ್ ಆರ್ ಎಲ್‌ ಎಮ್ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ. ಎಸ್,  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಪುತ್ತೂರು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೈತ ಉತ್ಪಾದಕ ಕಂಪೆನಿ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ, ಮುಖ್ಯಸ್ಥ ಡಾ. ಟಿ.ಜೆ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಹರೀಶ್ ಶೆಣೈ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ  ಕಡಬ ತಾಲೂಕು ಪಂಚಾಯಿತಿ ಡೇ-ಎನ್. ಆರ್.ಎಲ್.ಎಂ ವ್ಯವಸ್ಥಾಪಕ ಜಗತ್, ರಾಮಕುಂಜ ಗ್ರಾಪಂ ಅಧ್ಯಕ್ಷೆ ಬಿ. ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟ್, ಕಾರ್ಯದರ್ಶಿ ಲಲಿತ, ರಾಮಕುಂಜೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಕವಿತಾ ಪಾಲ್ಗೊಂಡಿದ್ದರು.







































 
 

ಪಂಚಾಯತ್ ಸದಸ್ಯರು, ಕೃಷಿ ಸಖಿ, ಪಶು ಸಖಿ ಈ ಸಂದರ್ಭದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ  ಫಲಾನುಭವಿಗಳಿಗೆ ತೆಂಗಿನ ಗಿಡಗಳನ್ನು ವಿತರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top