ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 23ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಸ್ಥಾಪನಾ ದಿನವನ್ನು ಎಪಿಎಂಸಿ ರಸ್ತೆಯ ಮೊನಾರ್ಚ್ ಬಿಲ್ಡಿಂಗ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ಥಾಪನಾ ದಿನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ರಾಮಕೃಷ್ಣ ಗೌಡ ಕರ್ಮಲ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪ್ರವರ್ತಕರಾದ ಲಿಂಗಪ್ಪ ಗೌಡ ಕೆ., ವಿಶ್ವನಾಥ ಗೌಡ ಕೆ., ನಾರಾಯಣ ಗೌಡ ಪಾದೆ, ಶ್ರೀಧರ ಗೌಡ ಕಣಜಾಲು, ಸಲಹಾ ಸಮಿತಿ ಸದಸ್ಯರಾದ ಬಾಬು ಗೌಡ ಬಂಡಾರದಮನೆ, ಸುರೇಶ್ ಗೌಡ ಕಲ್ಲಾರೆ, ದಯಾನಂದ ಕೆ.ಎಸ್., ಸೋಮಪ್ಪ ಗೌಡ ಬಡಾವು, ಸೀತಾರಾಮ ಪೆರಿಯತ್ತೋಡಿ, ಗೌರಿ ಬನ್ನೂರು, ಮೀನಾಕ್ಷಿ ಡಿ. ಗೌಡ, ಗ್ರಾಹಕರಾದ ಜಯರಾಮ ಗೌಡ ಹಿರಿಂಜ, ಪ್ರೇಮಾನಂದ ಬಿ. ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಸ್ವಾಗತಿಸಿ, ಎಪಿಎಂಸಿ ಶಾಖಾ ಮ್ಯಾನೇಜರ್ ತೇಜಸ್ವಿನಿ ವಂದಿಸಿದರು. ಪ್ರಭಾರ ಶಾಖಾ ಮ್ಯಾನೇಜರ್ ನಿಶಿತಾ ಯು.ಡಿ., ಸಿಬ್ಬಂದಿಗಳಾದ ಕಾವ್ಯ ಎ.ಎಸ್., ರಕ್ಷಿತ್ ಜಿ.ಎನ್., ಯಶ್ವಿತ್, ಪಿಗ್ಮಿ ಸಂಗ್ರಾಹಕರಾದ ಮೋಹನ್ ಗೌಡ, ಕುಸುಮಾಧರ ಸಹಕರಿಸಿದರು.