ನೆಲ್ಯಾಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ 23ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ನಿಟ್ಟಿನಲ್ಲಿ ನೆಲ್ಯಾಡಿ ಶಾಖೆಯಲ್ಲಿ ಸ್ಥಾಪನಾ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಹಿರಿಯರು, ಸಲಹಾ ಸಮಿತಿ ಸದಸ್ಯ ಜಿನ್ನಪ್ಪ ಗೌಡ ಪೊಸೋಳಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ನಿರ್ದೇಶಕ, ನೆಲ್ಯಾಡಿ ಶಾಖೆ ಸಲಹಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಂಟ್ಯಾನ, ಸಂಸ್ಥೆಯನ್ನು ಪ್ರಾರಂಭಿಸಿದ ಹಿರಿಯರನ್ನು, ಮುಖ್ಯ ಪ್ರವರ್ತಕರನ್ನು ಸ್ಮರಿಸಿ, ಸಂಸ್ಥೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಆಡಳಿತ ಮಂಡಳಿ, ಶಾಖಾ ಸಲಹಾ ಸಮಿತಿ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಸಂಘದ ನಿರ್ದೇಶಕಿ, ಸಲಹಾ ಸಮಿತಿ ಉಪಾಧ್ಯಕ್ಷೆ ಸುಪ್ರಿತಾ ರವಿಚಂದ್ರ, ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ಸುಲತ ಮೋಹನಚಂದ್ರ, ಪಿಗ್ಮಿ ಸಂಗ್ರಾಹಕರಾದ ಶಿವಪ್ರಸಾದ್, ತೀರ್ಥೇಶ್ವರ, ಗ್ರಾಹಕರಾದ ಎಸ್..ಎಂ.ಬಾಲಕೃಷ್ಣ, ರಕ್ಷಿತಾ ಕುಮಾರಿ, ಎಲ್ಯಣ್ಣ ಗೌಡ ಉಪಸ್ಥಿತರಿದ್ದರು.
ನೆಲ್ಯಾಡಿ ಶಾಖಾ ಮ್ಯಾನೇಜರ್ ವಿನೋದ್ ರಾಜ್ ಎಸ್. ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಜಯಂತ್ ಕುಮಾರ್, ಅಜಿತ್ ಬಿ.ಕೆ. ಸಹಕರಿಸಿದರು.