ಕರ್ನಾಟಕಕ್ಕೆ ರೈಲ್ವೆ ಅನುದಾನ 9 ಪಟ್ಟು ಹೆಚ್ಚಳ : ಮೋದಿ

ಈ ವರ್ಷದ ಬಜೆಟ್‌ನಲ್ಲಿ ರಾಜ್ಯಕ್ಕೆ 7,000 ಕೋ.ರೂ. ಅನುದಾನ

ಹೊಸದಿಲ್ಲಿ: ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶನಿವಾರ ಮೂರು ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಉದ್ಘಾಟನೆ ವೇಳೆ ಮಾತನಾಡಿದ ಅವರು, ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,000 ಕೋಟಿ ರೂ.ಗಿಂತ ಹೆಚ್ಚಿನ ಅನುದಾನ ನಿಗದಿಪಡಿಸಲಾಗಿದೆ. 2014ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ. ಒಟ್ಟು 8 ವಂದೇ ಭಾರತ್‌ ರೈಲುಗಳು ಕರ್ನಾಟಕವನ್ನು ಸಂಪರ್ಕಿಸಿವೆ ಎಂದಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ದಕ್ಷಿಣದ ರಾಜ್ಯಗಳ ತ್ವರಿತ ಅಭಿವೃದ್ಧಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ದಕ್ಷಿಣ ಭಾರತ ಅಪಾರ ಪ್ರತಿಭೆ, ಸಂಪನ್ಮೂಲಗಳು ಮತ್ತು ಅವಕಾಶಗಳ ನಾಡು ಎಂದು ಬಣ್ಣಿಸಿದ್ದಾರೆ.
ಈ ವರ್ಷ ತಮಿಳುನಾಡಿನ ರೈಲು ಬಜೆಟ್‌ಗೆ 6,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ಇದು 2014ಕ್ಕಿಂತ ಏಳು ಪಟ್ಟು ಹೆಚ್ಚು. ಈಗ ನೂತನ ವಂದೇ ಭಾರತ್‌ ರೈಲಿನಿಂದಾಗಿ ತಮಿಳುನಾಡಿನಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ ಎಂಟಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ.
ಪ್ರತಿ ಮಾರ್ಗದಲ್ಲಿ ವಂದೇ ಭಾರತ್‌ಗೆ ಬೇಡಿಕೆ ಹೆಚ್ಚಾಗಿದೆ. ಸೆಮಿ ಹೈಸ್ಪೀಡ್ ರೈಲುಗಳ ಆಗಮನ ಜನರಲ್ಲಿ ತಮ್ಮ ವ್ಯಾಪಾರ, ಉದ್ಯೋಗ ಮತ್ತು ಅವರ ಕನಸುಗಳನ್ನು ವಿಸ್ತರಿಸುವ ವಿಶ್ವಾಸವನ್ನು ತುಂಬಿದೆ. ದೇಶಾದ್ಯಂತ 102 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ 3 ಕೋಟಿಗೂ ಹೆಚ್ಚು ಜನರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top