ಪುತ್ತೂರು: ವೀರಮಂಗಲ ಶ್ರೀಕೃಷ್ಣ ಕಲಾ ಕೇಂದ್ರದ 21ನೇ ವರ್ಷದ ಸಂಭ್ರಮದ ಪ್ರಯುಕ್ತ 4ನೇ ವರ್ಷದ ‘ಶ್ರೀಕೃಷ್ಣ ಲೀಲೋತ್ಸವ’ ಸೆ.1 ಭಾನುವಾರ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9ಕ್ಕೆ ಶ್ರೀ ವಿಷ್ಣು ಸಹಸ್ರನಾಮಾರ್ಚನೆ, 9.30 ಕ್ಕೆ ವೀರಮಂಗಲ ಶ್ರೀ ಮಹಾವಿಷ್ಣು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 10 ಕ್ಕೆ ನಡೆಯುವ ಮನರಂಜನಾ ಸ್ಪರ್ಧೆಗಳನ್ನು ಪ್ರಗತಿಪರ ಕೃಷಿಕ ಶೇಷಪ್ಪ ಗೌಡ ಕಾಂತಿಲ ಉದ್ಘಾಟಿಸುವರು. ರಾತ್ರಿ 8 ರಿಂದ ಸವಣೂರು ಶ್ರವಣರಂಗ ಪ್ರತಿಷ್ಠಾನದ ತಾರನಾಥ ಸವಣೂರು ನಿರ್ದೇಶನದಲ್ಲಿ ವೀರಮಂಗಲ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಲಾವಿದರಿಂದ ಯಕ್ಷಗಾನ ‘ರಾಣಿ ಶಶಿಪ್ರಭೆ’ ಪ್ರದರ್ಶನಗೊಳ್ಳಲಿದೆ. ಸಂಜೆ 3.30 ಕ್ಕೆ ಗೋಪೂಜೆ, ಮುದ್ದುಕೃಷ್ಣ ಮೆರವಣಿಗೆ ನಡೆಯಲಿದೆ. 4.30 ಕ್ಕೆ ‘ನೃತ್ಯಾರ್ಚನೆ’ ಪ್ರದರ್ಶನಗೊಳ್ಳಲಿದೆ.
ರಾತ್ರಿ 8 ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಪೂರ್ವಾಧ್ಯಕ್ಷ ವಾಸುದೇವ ಇಡ್ಯಾಡಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಂಬೆಟ್ಟು ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲ ವಸಂತ ಮೂಲ್ಯ ಪಿ., ವೀರಮಂಗಲ ಶಾಲಾ ಸಹಶಿಕ್ಷಕಿ ಶೋಭಾ ಪಿ., ಭಕ್ತಕೋಡಿ ಎಸ್ ಜೆಎಂ ಪ್ರೌಢಶಾಲೆ ಸಹಶಿಕ್ಷಕ ಮೋಹನ್ ಕುಮಾರ್ ಎಸ್. ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ವೆಂಕಟಸುಬ್ರಾಯ ಮರಡಿತ್ತಾಯ ಹೊಳರಾಡಿ ಅವರನ್ನು ಗೌರವಿಸಲಾಗುವುದು. ಸಂಜೆ 7 ಕ್ಕೆ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ನೃತ್ಯ ರೂಪಕ ‘ಕೃಷ್ಣಾವತಾರ’ ಪ್ರದರ್ಶನಗೊಳ್ಳಲಿದೆ ಎಂದು ಶ್ರೀಕೃಷ್ಣ ಕಲಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.