ನಾಳೆ (ಸೆ.1) : ಪ್ರಗತಿ ಗ್ರೂಪ್‍ ಆಫ್‍ ಇನ್ಸಿಟ್ಯೂಷನ್ ನ ಸಾಂಸ್ಕೃತಿಕ ಹಾಗೂ ಸ್ಪೋರ್ಟ್ಸ್ ಫೆಸ್ಟ್-2024 ಸಮಾರಂಭ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಗ್ರೂಪ್‍ ಆಫ್‍ ಇನ್ಸಿಟ್ಯೂಷನ್ ನ ಸಾಂಸ್ಕೃತಿಕ ಹಾಗೂ ಸ್ಪೋರ್ಟ್ಸ್ ಫೆಸ್ಟ್-2024 ಸೆ.1 (ನಾಳೆ ) ಬೆಳಿಗ್ಗೆ 9 ಗಂಟೆಗೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಆರ್ ಜಿಯುಎಚ್‍ ಎಸ್‍ ನ ಸೆನೆಟ್ ಸದಸ್ಯ ಡಾ.ಶರಣ್‍ ಜೆ. ಶೆಟ್ಟಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಪಾಲ್ಗೊಳ್ಳಲಿದ್ದಾರೆ. ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಯು.ಶ್ರೀಪತಿ ರಾವ್ ಉಪಸ್ಥಿತರಿರುವರು.

ಸಮಾರಂಭದಲ್ಲಿ ಕಲ್ಲಡ್ಕ ವಿಠಲ್ ನಾಯಕ್ ಹಾಗೂ ತಂಡದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಪ್ರಗತಿ ಗ್ರೂಪ್‍ ಆಫ್‍ ಇನ್ಸಿಟ್ಯೂಷನ್ ನ ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top