ತಿರುಪತಿ ಲಡ್ಡು ಬೇಕಾದರೆ ಆಧಾರ್‌ ತೋರಿಸಬೇಕು!

ಟೋಕನ್‌ ಇಲ್ಲದ ಭಕ್ತರಿಗಾಗಿ ಈ ನಿಯಮ

ತಿರುಮಲ: ತಿರುಪತಿ ತಿಮ್ಮಪ್ಪನ ಲಡ್ಡು ಬೇಕಾದರೆ ಇನ್ನು ಆಧಾರ್‌ ಕಾರ್ಡ್‌ ತೋರಿಸಬೇಕು. ದರ್ಶನದ ಟೋಕನ್‌ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್‌ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ.


ಕೆಲ ಮಧ್ಯವರ್ತಿಗಳು ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದನ್ನು ತಡೆದು ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದ್ದು, ಟೋಕನ್‌ ಖರೀದಿಸದ ಭಕ್ತರು ಆಧಾರ್‌ ತೋರಿಸಿ 2 ಲಡ್ಡು ಪಡೆಯಬಹುದು. ಇದ್ಕಾಗಿ ಲಡ್ಡು ಕಾಂಪ್ಲೆಕ್ಸ್‌ನಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ದರ್ಶನದ ಟೋಕನ್‌ ಉಳ್ಳವರು ಮೊದಲಿನಂತೆ ತಮಗೆ ಸಿಗುವ ಒಂದು ಉಚಿತ ಲಡ್ಡುವಿನೊಂದಿಗೆ ಬೇಕಾದಷ್ಟು ಹೆಚ್ಚಿಗೆ ಲಡ್ಡುಗಳನ್ನು ಖರೀದಿಸಲು ಅವಕಾಶವಿದೆ.





































 
 


ಈ ನಡುವೆ, ಆಧಾರ್‌ ತೋರಿಸಿದವರಿಗೆ ತಿಂಗಳಿಗೆ ಎರಡೇ ಲಡ್ಡು ಎಂಬ ಊಹಾಪೋಹ ಹರಡಿದೆ. ಆದರೆ ತಿಂಗಳಿಗೆ ಎರಡೇ ಲಡ್ಡು ಎಂದಿಲ್ಲ. ಒಂದು ಬಾರಿ ಆಧಾರ್‌ ತೋರಿಸಿದರೆ 2 ಲಡ್ಡು ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಭಕ್ತರಿಗೆ ಲಡ್ಡು ಪ್ರಸಾದಗಳನ್ನು ಹೆಚ್ಚು ಪಾರದರ್ಶಕವಾಗಿ ಮಾರಾಟ ಮಾಡಲು ಟೋಕನ್ ರಹಿತ ಭಕ್ತರಿಗೆ ಆಧಾರ್‌ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಈ ಎಸ್‌ಇಎಚ್ ವೆಂಕೆ ಚೌದರಿ ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top