ಪುತ್ತೂರು:ಕಂದಾಯ ಇಲಾಖೆಯ ಪುತ್ತೂರು ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿದ್ದ ಬಿ. ರಾಮಣ್ಣ ನಾಯ್ಕರವರು (ನಾಳೆ) ಆ.31ರಂದು ವಯೋ ನಿವೃತ್ತಿ ಹೊಂದಲಿದ್ದಾರೆ.
ನೆಟ್ಟಣಿಗೆ ಮುಡೂರು ಗ್ರಾಮದ ಈಶ್ವರಮಂಗಲ ದಿ. ಶೇಷಪ್ಪ ನಾಯ್ಕ ಮತ್ತು ಪಾರ್ವತಿ ದಂಪತಿ ಪುತ್ರನಾಗಿರುವ ರಾಮಣ್ಣ ನಾಯ್ಕರವರು 1989ರಲ್ಲಿ ಕಂದಾಯ ಇಲಾಖೆಗೆ ಗ್ರಾಮಕರಣಿಕರಾಗಿ ನೇಮಕಗೊಂಡು ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮ ಕರಣಿಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರ ಚಾಮರಾಜನಗರದ ಸಂತೆಮಾರಳ್ಳಿಗೆ ವರ್ಗಾವಣೆಗೊಂಡಿದ್ದರು. 2001ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ ಪಡೆದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು. 2011ರಲ್ಲಿ ನೊ ಉಪ ತಹಶೀಲ್ದಾರ್ ಆಗಿ ಭಡ್ತಿ ಪಡೆದು ಸುಳ್ಯ, 2016ರಲ್ಲಿ ಬೆಳ್ಳಂಗಡಿ, 2017ರಲ್ಲಿ ಕೊಳ್ಳೆಗಾಲ ಸಹಾಯಕ ಆಯುಕ್ತರ ಕಚೇರಿಯಲ್ಲಿ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಉಪ ತಹಶೀಲ್ದಾರ್ ಆಗಿ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಕಂದಾಯ ಇಲಾಖೆಯಲ್ಲಿ ಒಟ್ಟು 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.
ಬಿ. ರಾಮಣ್ಣ ನಾಯ್ಕರು ಪತ್ನಿ ಶಶಿಕಲಾ, ತಾಯಿ ಪಾರ್ವತಿ ಹಾಗೂ ಸಹೋದರರೊಂದಿಗೆ ಈಶ್ವರಮಂಗಲದಲ್ಲಿ ವಾಸವಾಗಿದ್ದಾರೆ.