ಪುತ್ತೂರು:ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸದಸ್ಯತಾ ಅಭಿಯಾನ 2024ರ ಕಾರ್ಯಗಾರ ಕಲ್ಲೇಗ ಭಾರತ ಮಾತಾ ಸಭಾಭವನದಲ್ಲಿ ಇಂದು ನಡೆಯಿತು.
ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಪಿ ಉಜ್ರೆಮಾರು ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತಾವನೆಯನ್ನು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಪುತ್ತೂರು ಪ್ರಭಾರಿ ಸುನೀಲ್ ಆಳ್ವಾ ಪ್ರಾಸ್ತಾವಿಕವಾಗಿ ಮಾತಾನಾಡಿದರು,
ಜಿಲ್ಲಾ ಸದಸ್ಯತನಾ ಅಭಿಯಾನದ ಸಂಯೋಜಕ ವಿಕಾಸ್ ಪುತ್ತೂರು ಮಾತನಾಡಿದ, ಕಾರ್ಯಾಗಾರದ ಕಾರ್ಯಸೂಚಿಯಾದ ಸದಸ್ಯತಾ ಅಭಿಯಾನವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಸಂದರ್ಭೋಚಿತವಾಗಿ ಮಾತಾನಾಡಿದರು
ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಸದಸ್ಯತನಾ ಅಭಿಯಾನದ ಸಹ ಸಂಚಾಲಕ ನಿತೀಶ್ ಶಾಂತಿವನ, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಅನಿಲ್ ತೆಂಕಿಲ, ನಿಕಟಪೂರ್ವ ಅಧ್ಯಕ್ಷರುಗಳಾದ ಸಾಜ ರಾಧಕೃಷ್ಣ ಆಳ್ವಾ,, ಪಿ ಜಿ ಜಗನ್ನೀವಾಸ್ ರಾವ್ , ಬೂಡಿಯಾರ್ ರಾಧಕೃಷ್ಣ ರೈ, ಒ.ಬಿ.ಸಿ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್, ಅಪ್ಪಯ ಮಣಿಯಾಣಿ, ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು. ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ ಸ್ವಾಗತಿಸಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು ವಂದಿಸಿದರು. ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ನಿರೂಪಿಸಿದರು.
ಗ್ರಾಮಾಂತರ ಮಂಡಲ ಸದಸ್ಯತನಾ ಅಭಿಯಾನದ ಪ್ರಮುಖರಾಗಿ ಉಮೇಶ್ ಕೋಡಿಬೈಲು, ಹರಿಪ್ರಸಾದ್ ಯಾದವ್, ಸುನೀಲ್ ದಡ್ಡು ಹಾಗೂ ನಗರ ಮಂಡಲಕ್ಕೆ ನಾಗೇಶ್ ಪ್ರಭು, ಯುವರಾಜ್ ರಿಯತ್ತೋಡಿ, ವಸಂತಲಕ್ಷ್ಮಿಯವರನ್ನು ಜಿಲ್ಲಾ ಬಿಜೆಪಿಯಿಂದ ನಿಯೋಜಿಸಲಾಗಿದೆ.