ಎತ್ತಿನಹೊಳೆ ಯೋಜನೆ ಶೀಘ್ರ ಲೋಕಾರ್ಪಣೆ: ಡಿ.ಕೆ.ಶಿವಕುಮಾರ್‌

ಕರಾವಳಿ ಜನರ ವಿರೋಧ ಲೆಕ್ಕಿಸದೆ ಅನುಷ್ಠಾನಗೊಂಡ ಯೋಜನೆ

ಬೆಂಗಳೂರು: ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ಸಜ್ಜಾಗಿದೆ. ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್ ಪ್ರಾರಂಭ ಮಾಡಿದ್ದೇವೆ. ಯೋಜನೆಗಾಗಿ ಇಂಜಿನಿಯರ್‌ಗಳು ಸೇರಿದಂತೆ ಪ್ರತಿಯೊಬ್ಬ ನೌಕರ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈಗ 550 ಕ್ಯುಸೆಕ್ ನೀರು ಹರಿಯುತ್ತಿದೆ. ಇದರ ಆರು ಪಟ್ಟು ನೀರು ಉದ್ಘಾಟನೆ ದಿನ ಹರಿಸುತ್ತೇವೆ ಎಂದು ಉಪಮುಖ್ಯಮಂತ್ರು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಬಹಳ ಜನ ಭೂಮಿ ಕೊಟ್ಟಿದ್ದಾರೆ. ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದನ್ನು ಜನರಿಗೆ ಅರ್ಪಣೆ ಮಾಡುತ್ತೇವೆ. ಉದ್ಘಾಟನೆ ದಿನ ಸರಿಯಾದ ವ್ಯವಸ್ಥೆ ಮಾಡಿಕೊಂಡು ಸಾವಿರಾರು ಜನ ಸೇರುವಂತಹ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಈಗ ಯೋಜನೆ ಪೂರ್ಣಗೊಳ್ಳಲು ಸ್ವಲ್ಪ ತೊಡಕಿದೆ, ಹಾಗಾಗಿ ವಾಣಿವಿಲಾಸ ಸಾಗರ ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳಲು ನೀರು ಹರಿಸುತ್ತಿದ್ದೇವೆ. 10 ದಿನಗಳಲ್ಲಿ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ.







































 
 

ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಈ ಯೋಜನೆಯಿಂದ ಪ್ರಯೋಜನ ಆಗಲಿದೆ. ಆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಜನರು ಪಕ್ಷಾತೀತವಾಗಿ ಸಹಕಾರ ಕೊಟ್ಟಿದ್ದು, ಅವರೆಲ್ಲರನ್ನೂ ಆಹ್ವಾನಿಸುತ್ತೇವೆ ಎಂದಿದ್ದಾರೆ. ಎತ್ತಿನಹೊಳೆ ಯೋಜನೆಗೆ ಮೊದಲ ಹಂತದ ಪ್ರಾಯೋಗಿಕ ನೀರಿನ ಹರಿವಿಗೆ ಬುಧವಾರ ಸಂಜೆ ಸಕಲೇಶಪುರ ತಾಲ್ಲೂಕಿನ ಕಪ್ಪಳ್ಳಿ ಬಳಿ ಡಿಸಿಎಂ ಚಾಲನೆ ನೀಡಿದ್ದರು. ಇಂದು ಹೆಬ್ಬನಹಳ್ಳಿ ಬಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕರಾವಳಿ ಜನರ ತೀವ್ರ ವಿರೋಧವನ್ನು ಲೆಕ್ಕಿಸದೆ ನೇತ್ರಾವತಿ ನದಿ ನೀರನ್ನು ಮೂಲದಲ್ಲೇ ತಿರುಗಿಸುವ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಿಸಲಾಗಿದೆ. ದಶಕಗಳ ಕಾಲ ಕಾಮಗಾರಿ ನಡೆದ ಈ ಯೋಜನೆಗೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ತಾವು ಅಧಿಕಾರದಲ್ಲಿದ್ದಾಗಲೆಲ್ಲ ಬೆಂಬಲ ನೀಡಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top