5.35 ತಾಸು ನಡೆದ ಪಂದ್ಯ : ಟೆನಿಸ್‌ನಲ್ಲಿ ನೂತನ ದಾಖಲೆ ಸೃಷ್ಟಿ

ನ್ಯೂಯಾರ್ಕ್‌ : ಅವರಿಬ್ಬರು ಆಡಿದ್ದು ಬರೋಬ್ಬರಿ 5 ತಾಸು 35 ನಿಮಿಷ. ಪಂದ್ಯ ನೋಡುತ್ತಿದ್ದ ಪ್ರೇಕ್ಷಕರಿಗೆ ಟೆನಿಸ್‌ನ ಅಷ್ಟೂ ರೋಮಾಂಚನಗಳು ಈ ಐದೂವರೆ ತಾಸಿನಲ್ಲಿ ದೊರಕಿದೆ. ಒಂದು ಟಿ20 ಕ್ರಿಕೆಟ್‌ ಪಂದ್ಯಕ್ಕೂ ಹೆಚ್ಚು ಹೊತ್ತು ಇವರಿಬ್ಬರೇ ಆಡಿದ್ದಾರೆ.
ಇದು ಟೆನಿಸ್‌ ಆಟದ ಇತಿಹಾಸದಲ್ಲೇ ಒಂದು ವಿನೂತನ ದಾಖಲೆ. ನಿನ್ನೆ ನಡೆದ ಯುಎಸ್‌ ಓಪನ್‌ ಟೂರ್ನಿಯಲ್ಲಿ ಈ ದಾಖಲೆ ಸೃಷ್ಟಿಯಾಗಿದೆ. ಬ್ರಿಟನ್‌ನ ಡ್ಯಾನ್‌ ಎವನ್ಸ್‌ ಮತ್ತು ರಷ್ಯಾದ ಕರೆನ್‌ ಕಶನೋವ್‌ ನಡುವೆ ನಡೆದ ಈ ಆಟ ಯುಎಸ್‌ ಓಪನ್‌ ಟೆನಿಸ್‌ನ ಅತಿ ಸುದೀರ್ಘ ಪಂದ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಡ್ಯಾನ್‌ ಎವನ್ಸ್‌ 6-7, 7-6, 7-6, 4-6, 6-4 ಸೆಟ್‌ಗಳಿಂದ ಎದುರಾಳಿಯನ್ನು ಸೋಲಿಸಿ ಬೀಗಿದ್ದಾರೆ. ಭರ್ತಿ 5.35 ತಾಸು ಪಂದ್ಯ ನಡೆದಿದೆ. 0-4 ಹಿನ್ನಡೆಯಲ್ಲಿದ್ದ ಎವನ್ಸ್‌ ನಂತರ ಪುಟಿದೆದ್ದು, ಅದ್ಭುತವಾಗಿ ಹೋರಾಡಿ ಇಡೀ ಪಂದ್ಯದ ಗತಿಯನ್ನು ಬದಲಿಸಿರುವುದಕ್ಕೆ ಪ್ರೇಕ್ಷಕರು ಫಿದಾ ಆಗಿ ವಾಹ್‌ ಎಂದಿದ್ದಾರೆ. ಜಾಗತಿಕವಾಗಿ 184 ರಾಂಕಿಂಗ್‌ ಹೊಂದಿರುವ ಎವನ್ಸ್‌ ಬ್ರಿಟನ್‌ನ ನಂಬರ್‌ ಒನ್‌ ಆಟಗಾರ.
ಈ ಹಿಂದೆ 5.26 ತಾಸು ನಡೆದ ಪಂದ್ಯ ಟೆನಿಸ್‌ನ ಅತಿ ಸುದೀರ್ಘ ಪಂದ್ಯ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಈ ಪಂದ್ಯದ ದಾಖಲೆಯನ್ನು ನಿನ್ನೆ ಎವನ್ಸ್‌ ಮತ್ತು ಕಶನೋವ್‌ ನಡುವಿನ ಪಂದ್ಯ ಮುರಿದಿದೆ. 1992ರಲ್ಲಿ ಸ್ವೀಡನ್‌ನ ಸ್ಟೀಫನ್‌ ಎಡ್ಬರ್ಗ್‌ ಮತ್ತು ಅಮೆರಿಕದ ಮೈಕೆಲ್‌ ಚಾಂಗ್‌ ನಡುವೆ ನಡೆದ ಪಂದ್ಯ 5.26 ತಾಸುಗಳ ತನಕ ಮುಂದುವರಿದು ಸ್ಟೀಫನ್‌ ಗೆದ್ದಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top