ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ ಸೆ..5 ರಂದು ನಡೆಯಲಿದೆ.
ಭಾದ್ರಪದ ಶುಕ್ಲದ ಹಸ್ತಾನಕ್ಷತ್ರದಂದು ಕದಿರು ಕಟ್ಟುವ ಕ್ರಮ ವರ್ಷಂಪ್ರತಿ ಇಲ್ಲಿ ನಡೆಯುತ್ತಿದ್ದು, ಮೊದಲಿಗೆ ಉತ್ಸವಮೂರ್ತಿಯೊಂದಿಗೆ ದೇವಳದ ಪಶ್ಚಿಮ ಭಾಗದ ಅಶ್ವತ್ಥ ಕಟ್ಟೆಯವರೆಗೆ ಚೆಂಡೆ. ವಾದ್ಯದೊಂದಿಗೆ ಸಾಗಿ ಅಲ್ಲಿ ಸಂಗ್ರಹಿಸಿಟ್ಟ ತೆನೆಗಳನ್ನು ತರಲಾಗುತ್ತದೆ. ಬಳಿಕ ಪೂಜೆ ನಡೆದು ದೇಗುಲದ ಗರ್ಭಗುಡಿ, ಪರಿವಾರ ದೇವರ ಗುಡಿಗಳು, ತೀರ್ಥಬಾವಿ. ಉಗ್ರಾಣ, ತುಳಸೀಕಟ್ಟೆ ಇತ್ಯಾದಿಗಳಿಗೆ ಕದಿರನ್ನು ಕಟ್ಟಿದ ಬಳಿಕ ನೆರೆದ ಭಕ್ತರಿಗೆ ಕದಿರನ್ನು ವಿತರಿಸಲಾಗುತ್ತದೆ. ಭಕ್ತರು ತೆನೆಗಳನ್ನು ಒಟ್ಟು ತಮ್ಮ ಮನೆಗಳಲ್ಲಿ ಕಟ್ಟಿ ಹೊಸ ಅಕ್ಕಿಯ ಊಟದೊಂದಿಗೆ ತೆನೆಹಬ್ಬ ಆಚರಿಸುತ್ತಾರೆ.
ಶ್ರೀ ದೇಗುಲದ ಪದ್ಮತಿಯಂತೆ ಹಸ್ತಾ ನಕ್ಷತ್ರ ಒದಗುವ ದಿನವೇ ಈ ಆಚರಣೆ ಮಾಡಲಾಗುತ್ತದೆ ಎಂದು ದೇವಾಲಯಗಳ ಅಧ್ಯಯನಕಾರ ಪಿ.ಜಿ. ಚಂದ್ರಶೇಖರ್ ರಾವ್ ತಿಳಿಸಿದ್ದಾರೆ