ಪುತ್ತೂರು: ಸಂತ ಫಿಲೋಮಿನ ಕಾಲೇಜಿನ ಮಾನವಿಕ ವಿಭಾಗದಿಂದ ‘ಬೇಸಾಯದತ್ತ ನಮ್ಮ ಚಿತ್ತ’ ಕಾರ್ಯಕ್ರಮ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶಿವ ಭಟ್ ಅವರ ಕೃಷಿ ಪ್ರದೇಶ ಕೆಯ್ಯೂರಿನ ಕಣಿಯಾರು ದೇವಳಿಕೆಯಲ್ಲಿ ನಡೆಯಿತು.

ಮಾನವಿಕ ವಿಭಾಗದ ಮುಖ್ಯಸ್ಥ ಡಾ.ನೋರ್ಬರ್ಟ್ ಮಸ್ಕರೆನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯ ಮಹತ್ವ, ಗದ್ದೆಯಲ್ಲಿ ಬೆಳೆಯುವ ಭತ್ತ ಮತ್ತು ನಾಟಿ ನೆಡುವ ವಿಧಾನ, ಭತ್ತದ ವಿವಿಧ ತಳಿಗಳು, ತುಳುನಾಡಿನ ವಿವಿಧ ಕೃಷಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮ ಪ್ರಾಯೋಜಕ ಶಿವ ಭಟ್, ನಾಟಿ ಮಾಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ನಾವೆಲ್ಲರೂ ಹಳ್ಳಿಯ ಜನರು. ಹಳ್ಳಿಯನ್ನು ಪ್ರೀತಿಸೋಣ, ಹಳ್ಳಿಯ ಸೊಬಗನ್ನು ಸವಿಯೋಣ, ಹಳ್ಳಿಯ ಜೀವನ ಕ್ರಮವನ್ನು ನಮ್ಮ ಜೀವನದಲ್ಲಿ ಅಳವಡಿಸೋಣ ಎಂದರು.
ಈ ಸಂದರ್ಭದಲ್ಲಿ ಶಿವ ಭಟ್ ಮತ್ತು ಅವರ ತಾಯಿಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀಷ್ಮ ವಂದಿಸಿದರು. ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರೂಪಿಸಿದರು. ಕೊನೆಯದಾಗಿ ವಿದ್ಯಾರ್ಥಿಗಳಿಗೆ ಮನೋರಂಜನೆಯ ಸಲುವಾಗಿ ಕೆಸರಿನ ಗದ್ದೆಯಲ್ಲಿ ಆಡುವ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.