ಸಂಸದೆ, ನಟಿ ಕಂಗನಾ ರಣಾವತ್‌ಗೆ ಜೀವ ಬೆದರಿಕೆ

ಹೊಸದಿಲ್ಲಿ: ಎಮರ್ಜೆನ್ಸಿ ಚಿತ್ರದ ಟ್ರಯಲರ್‌ ಬಿಡುಗಡೆಯಾದ ಬೆನ್ನಿಗೆ ಸಂಸದೆ, ನಟಿ ಕಂಗನಾ ರಣಾವತ್‌ಗೆ ಜೀವ ಬೆದರಿಕೆ ಒಡ್ಡಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಆಧಾರಿಸಿ ಕಂಗನಾ ಎಮರ್ಜೆನ್ಸಿ ಚಿತ್ರ ನಿರ್ದೇಶಿಸಿ ಅದರಲ್ಲಿ ತಾನೇ ಇಂದಿರಾ ಗಾಂಧಿಯಾಗಿ ನಟಿಸಿದ್ದಾರೆ. ಚಿತ್ರದ ಟ್ರಯಲರನ್ನು ನಿನ್ನೆ ಬಿಡುಗಡೆಗೊಳಿಸಿದ್ದು, ಇದರ ಬೆನ್ನಿಗೆ ಸಿಕ್ಖ್‌ ಉಗ್ರಗಾಮಿ ಸಂಘಟನೆಯೊಂದು ಕಂಗನಾಗೆ ಜೀವ ಬೆದರಿಕೆಯೊಡ್ಡಿದೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಸಂಸದೆಯೂ ಆಗಿರುವ ಕಂಗನಾ ಬೆದರಿಕೆ ಕುರಿತು ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾರೆ.
ಇಂದಿರಾ ಗಾಂಧಿ ಹಂತಕರಾದ ಖಲಿಸ್ಥಾನಿ ಕಾರ್ಯಕರ್ತ ಜರ್ನೈಲ್‌ ಸಿಂಗ್‌ ಬಿಂದ್ರನ್‌ವಾಲೆಯನ್ನು ಎಮರ್ಜೆನ್ಸಿ ಚಿತ್ರದಲ್ಲಿ ಉಗ್ರನಂತೆ ತೋರಿಸಿದರೆ ಇಂದಿರಾ ಗಾಂಧಿಗಾದ ಗತಿ ನಿಮಗೂ ಆಗಬಹುದು. ಸತ್ವಂತ್‌ ಸಿಂಗ್‌ ಮತ್ತು ಬಿಯಾಂತ್‌ ಸಿಂಗ್‌ಗೆ (ಇಂದಿರಾ ಗಾಂಧಿ ಹಂತಕರು) ನಾವು ಪ್ರಾಣ ಕೊಡಲೂ ತಯಾರಿದ್ದೇವೆ. ಪ್ರಾಣ ಕೊಡುವವರಿಗೆ ಪ್ರಾಣ ತೆಗೆಯಲೂ ಗೊತ್ತು ಎಂದು ಕ್ರೈಸ್ತ ಧರ್ಮದಿಂದ ಸಿಕ್ಖ್‌ ಧರ್ಮಕ್ಕೆ ಬಂದಿರುವ ವಿಕ್ಕಿ ಥಾಮಸ್‌ ಸಿಂಗ್‌ ಎಂಬಾತ ವೀಡಿಯೊದಲ್ಲಿ ಕಂಗನಾಗೆ ಬೆದರಿಕೆಯೊಡ್ಡಿದ್ದಾನೆ. ಈ ವೀಡಿಯೊವನ್ನು ಪೊಲೀಸರಿಗೆ ನೀಡಿರುವ ಕಂಗನಾ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top