ಜನಪ್ರಿಯ ನಟ ಸಿದ್ದಿಕ್‌ ವಿರುದ್ಧ ಲೈಂಗಿಕ ಶೋಷಣೆ ಆರೋಪ

ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಹೇಮಾ ಸಮಿತಿ ವರದಿ

ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೇರಳ ಸರಕಾರ ಬಹಿರಂಗಗೊಳಿಸಿದ ಬಳಿಕ ಬಿರುಗಾಳಿಯೇ ಬೀಸಿದೆ. ಚಿತ್ರರಂಗದ ಘಟಾನುಘಟಿಗಳೆಲ್ಲ ವರದಿಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಇದರ ಬೆನ್ನಲ್ಲೇ ಮಲಯಾಳಂನ ಜನಪ್ರಿಯ ನಟ ಸಿದ್ದಿಕ್‌ ವಿರುದ್ಧ ಯುವ ನಟಿ ರೇವತಿ ಸಂಪತ್ ಮಾಡಿದ ಲೈಂಗಿಕ ಕಿರುಕುಳದ ಆರೋಪ ಅಲ್ಲೋಲಕಲ್ಲೋಲ ಎಬ್ಬಿಸಿದೆ.
ಈ ಆರೋಪದ ಬೆನ್ನಲ್ಲೇ ಸಿದ್ದಿಕಿ ಅವರು ಮಲಯಾಳಂ ಕಲಾವಿದರ ಸಂಘ ʼಅಮ್ಮʼದ (AMMA) ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ನಟಿಯಋ ಲೈಂಗಿಕ ಶೋಷಣೆಯ ಮೇಲೆ ಬೆಳಕು ಚೆಲ್ಲಿದ್ದು, ಹಲವು ನಟರು, ನಿರ್ದೇಶಕರು, ನಿರ್ಮಾಪಕರು ಈ ವರದಿ ಬಹಿರಂಗವಾದ ಬಳಿಕ ಒದ್ದಾಡುತ್ತಿದ್ದಾರೆ.

ʼಅಮ್ಮʼದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಕ್ಕೆ ಇಳಿದಿರುವ ಬಗ್ಗೆ ಅವರು ಅಧ್ಯಕ್ಷ ಹಿರಿಯ ನಟ ಮೋಹನ್​ಲಾಲ್‌ಗೆ ಇ-ಮೇಲ್ ಮೂಲಕ ತಿಳಿಸಿದ್ದಾರೆ. ‘ನನ್ನ ವಿರುದ್ಧ ಕೇಳಿ ಬಂದ ಆರೋಪದ ಕಾರಣಕ್ಕೆ ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. 2016ರಲ್ಲಿ ಸಿದ್ದಿಕ್‌ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ರೇವತಿ ಆರೋಪಿಸಿದ್ದಾರೆ.































 
 

ಸಾಮಾಜಿಕ ಜಾಲತಾಣದ ಮೂಲಕ ಸಿದ್ದಿಕ್‌ ನನ್ನನ್ನು ಸಂಪರ್ಕಿಸಿದರು. ಮಗಳೇ ಎಂದು ಅವರು ಕರೆಯುತ್ತಿದ್ದರು. ನಾನು ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಅವರು ನನ್ನನ್ನು ಮತ್ತೆ ಸಂಪರ್ಕಿಸಿದರು. ಆಗಲೂ ಅವರು ಮಗಳೇ ಎನ್ನುತ್ತಿದ್ದರು. ಅವರ ಉದ್ದೇಶ ಕೆಟ್ಟದಿದೆ ಎಂದು ತಿಳಿಯುವ ವಯಸ್ಸು ನನ್ನದಾಗಿರಲಿಲ್ಲ. ನನಗೆ ನಟನೆಯಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದ್ದರು’ ಎಂದು ರೇವತಿ ಸಂಪತ್ ಟಿವಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
21ನೇ ವಯಸ್ಸಿಗೆ ನಾನು ಸ್ಥಳೀಯ ಥಿಯೇಟರ್​ಗೆ ಸಿನಿಮಾ ನೋಡಲು ಹೋಗಿದ್ದೆ. ನಂತರ ಸಿದ್ದಿಕ್‌ ಆ ಸಿನಿಮಾ ಬಗ್ಗೆ ಮಾತನಾಡಲು ಹೋಟೆಲ್ ಒಂದಕ್ಕೆ ಕರೆದರು. ನನ್ನನ್ನು ರೂಂನಲ್ಲಿ ಲಾಕ್ ಮಾಡಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಅವರು ಬಂದು ಅಪ್ಪಿದರು. ನಾನು ಬದುಕುತ್ತೀನಾ ಎಂದೆಲ್ಲ ಅನಿಸಿತ್ತು ಎಂದಿದ್ದಾರೆ ನಟಿ.
ನಾನು ಕಷ್ಟಪಟ್ಟು ರೂಂನಿಂದ ಹೊರಬಂದೆ. ನಾನು ಈ ವಿಚಾರವನ್ನು ಸಾರ್ವಜನಿಕವಾಗಿ ಹೇಳುತ್ತೇನೆ ಎಂದು ಆಗಲೇ ಹೇಳಿದ್ದೆ. ನಿನ್ನನ್ನು ಯಾರು ನಂಬುತ್ತಾರೆ? ನೀನು ಒಂದು ಸಿನಿಮಾದಲ್ಲಾದರೂ ನಟಿಸಿದ್ದೀಯಾ? ನಿನ್ನನ್ನು ಯಾರೂ ಗುರುತಿಸಲ್ಲ ಎಂದಿದ್ದರು. ನನಗೆ ಈ ನೋವು ಹಾಗೆಯೇ ಇದೆ ಎಂದು ಅವರು ನಟಿ ಬಹಿರಂಗಪಡಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top