ಅತ್ಯಾಚಾರ ಖಂಡಿಸಿದವರು ಷರಿಯಾ ಪ್ರಕಾರ ಶಿಕ್ಷೆ ನೀಡಿ- ಸುನಿಲ್‌ ಸವಾಲು | ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರನ್ನು ಕಿತ್ತು ಎಸೆಯಿರಿ : ಸಿದ್ದರಾಮೇಶ್ವರ ಸ್ವಾಮೀಜಿ | ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ಖಂಡಿಸಿ ಬೋವಿ ಸಮುದಾಯದಿಂದ ಬೃಹತ್‌ ಪ್ರತಿಭಟನೆ

ಕಾರ್ಕಳ : ಕಾರ್ಕಳದಲ್ಲಿ ಹಿಂದೂ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಹಿಂದು ಯುವತಿಯ ಮೇಲೆ ಅತ್ಯಾಚಾರ ಮಾಡಿದಾಗ ಆತ ನಮ್ಮ ಒಕ್ಕೂಟದಲ್ಲಿ ಇಲ್ಲ ಎನ್ನುತ್ತಾರೆ. ನೀವು ನಿಜವಾಗಿಯೂ ಷರಿಯಾ ನಿಯಮ ಪಾಲಿಸುವವರಾಗಿದ್ದರೆ ಅದರಂತೆ ಅಪರಾಧಿಗೆ ಶಿಕ್ಷೆ ನೀಡಿ ಎಂದು ಶಾಸಕ ಸುನಿಲ್‌ ಸವಾಲು ಹಾಕಿದ್ದಾರೆ.

ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ಖಂಡಿಸಿ ಬೋವಿ ಸಮುದಾಯದಿಂದ ಬೃಹತ್‌ ಪ್ರತಿಭಟನೆಯಲ್ಲಿ ಅವರು ಈ ಸವಾಲು ಹಾಕಿದರು.

ಸುನಿಲ್ ಕೆ. ಆರ್, ಹೆಣ್ಣಿಗೆ ವಿಶೇಷ ಗೌರವ ಕೊಡುವ ಸಂಸ್ಕೃತಿ ನಮ್ಮದು. ಅಂತಹ ಹೆಣ್ಣುಮಗಳ ಮೇಲಾದ ಅತ್ಯಾಚಾರ ಸಹಿಸಲು ಅಸಾಧ್ಯ. ಎಲ್ಲೋ ಆಗುವ ಅತ್ಯಾಚಾರ ಘಟನೆಗಳಿಗೆ ನಾವಿಲ್ಲಿ ಪ್ರತಿಭಟನೆ ಮಾಡುತ್ತಿದ್ದೆವು. ಈಗ ಇಲ್ಲಿಯೇ ನಮ್ಮ ಸಮಾಜದ‌ ಹೆಣ್ಣುಮಗಳಿಗಾದ ಅತ್ಯಾಚಾರದ‌ ವಿರುದ್ಧ ಸಮಸ್ತ ಹಿಂದೂ ಸಮುದಾಯ ಎದ್ದು‌ ನಿಲ್ಲಬೇಕಾಗಿದೆ ಎಂದ ಅವರು, ಧರ್ಮ ಸ್ಥಾಪನೆಗಾಗಿ‌ ಅವತಾರ ತಾಳಿದ ಶ್ರೀ ಕೃಷ್ಣನ ಜನ್ಮದಿನದಂದು ಅಧರ್ಮದ ವಿರುದ್ಧ ಧರ್ಮದ‌ ಸ್ಥಾಪನೆಗಾಗಿ ಹೋರಾಟ ಎಂಬಂತೆ ಇಂತಹ ಕೃತ್ಯ ಕಾರ್ಕಳ, ಕರಾವಳಿ ಭಾಗದಲ್ಲಿ ಇಂದೇ ಕೊನೆಯಾಗಲಿ ಎಂಬ ಸಂಕಲ್ಪ ಮಾಡೋಣ ಎಂದರು.































 
 

ಕರಾವಳಿಯಲ್ಲಿ 25 ವರ್ಷಗಳಿಂದ ಡ್ರಗ್ಸ್, ಲವ್ ಜಿಹಾದ್, ಗೋ ಹತ್ಯೆಯಂತಹ ಕೃತ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ‌ಮಾಡುತ್ತಾ ಬಂದಿದ್ದೇವೆ. ಆದರೂ ಕೆಲವೊಂದು ಆಮಿಷಗಳಿಗೆ ನಮ್ಮ‌ ಸಮಾಜದ ಹೆಣ್ಣುಮಕ್ಕಳು ಬಲಿಯಾಗುತ್ತಿರುವುದು ವಿಷಾದನೀಯ ಎಂದರು.

ದೆಹಲಿಯಲ್ಲಾದ‌ ನಿರ್ಭಯ ಹತ್ಯೆ, ಕೇರಳದ ಲವ್ ಜಿಹಾದ್, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ, ಬಾಂಗ್ಲಾದಲ್ಲಿ ಹಿಂದುಗಳ ನರಮೇಧ ಘಟನೆಯ ವಿರುದ್ಧ ಕಾರ್ಕಳದಲ್ಲಿ ಜಾಗೃತಿ ಮೂಡಿಸಿದ್ದೇವೆ. ಆದರೆ ಈಗ ಕಾರ್ಕಳದಲ್ಲೇ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ ಕೃತ್ಯ ನಡೆದಿದೆ. ಡ್ರಗ್ಸ್‌, ಲವ್ ಜಿಹಾದ್ ಕುರಿತಂತೆ ಸರಕಾರ ಮೃದು ಧೋರಣೆ ಅನುಸರಿಸುವವರೆಗೆ ಇಂತಹ ಪ್ರಕರಣ ನಡೆಯುತ್ತಲೇ ಇರುತ್ತವೆ ಎಂದು ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

ಲವ್ ಜಿಹಾದ್‌ಗೆ ಬಲಿಯಾದವರೆಲ್ಲ ಹಿಂದೂ ಹೆಣ್ಣುಮಕ್ಕಳು ಎನ್ನುವುದು  ಎಂಬುದು ಗಮನಾರ್ಹ ವಿಷಯ. ಅಮಲು ಪದಾರ್ಥ ತಂದು ಕೊಟ್ಟವರು ಯಾರು? ಎಲ್ಲಿಂದ ದೊರಕಿತು? ಹಿಂದಿರುವ ಷಡ್ಯಂತ್ರ ಯಾವುದು ಎಂಬುದು ತನಿಖೆಯಿಂದ ಹೊರಬೇಕು. ಹಿಜಾಬ್ ಬೇಕು ಎಂದು ಮುಸ್ಲಿಂ ಹುಡುಗಿಯರು  ಕೋರ್ಟ್‌ಗೆ ಹೋಗಬೇಕಾದರೆ ಅದರ ವೆಚ್ಚ ಭರಿಸದವರು ಯಾರು? ಹಿಜಾಬ್, ತಲಾಕ್ ಎಂದಾಗ ಮುಸಲ್ಮಾನರ ಪರ ಮಾತನಾಡಿದವರು ಇದೀಗ

ಡ್ರಗ್ಸ್, ಲವ್ ಜಿಹಾದ್ ವಿರುದ್ಧ ಜಾಗೃತಿ ಮತ್ತು ಹೋರಾಟ ಒಟ್ಟಾಗಿ‌ ನಡೆಯಲಿ. ರಾಮ ಮಂದಿರಕ್ಕೆ‌ ಬರುವುದಿಲ್ಲ, ಕುಂಕುಮ ಹಚ್ಚುವುದಿಲ್ಲ ಎಂಬ ಜಿಹಾದಿ  ಮಾನಸಿಕತೆ ಉಳ್ಳವರ ಬಳಿ ಯಾವ ರೀತಿಯ ನ್ಯಾಯ ಪಡೆಯಲು ಸಾಧ್ಯ? ಇಂತಹ ಮಾನಸಿಕತೆಯ ನಡುವೆ ನಾವು ಹೋರಾಡಬೇಕು. ಖಾಕಿ ಖಾಕಿಯಾಗೇ ಕೆಲಸ ಮಾಡಬೇಕು. ಖಾಕಿಯನ್ನು ಕೈ ಕಟ್ಟುವ ಕೆಲಸವನ್ನು ಸರಕಾರ ಮಾಡಬಾರದು ಎಂದರು.

ಭೋವಿ‌ ಸಮುದಾಯದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಬೆಳೆ ಫಸಲು ಕೊಡುವ ಮೊದಲು ಬರುವ ಕಸವನ್ನು ಕಿತ್ತು ಬಿಸಾಕುವಂತೆ ಭಾರತೀಯ ಸಂಸ್ಕೃತಿ ಹಾಗೂ ಪೂಜ್ಯನೀಯ ಸ್ತ್ರೀ ಕುಲದ ಮೇಲೆ ದಾಳಿ ಮಾಡುವವರನ್ನು ಕಿತ್ತು ಎಸೆಯುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಕರೆ ನೀಡಿದ ಅವರು, ಭಾರತ ಜಗತ್ತಿನ‌‌ ಸಂಸ್ಕಾರ, ಸಂಸ್ಕೃತಿಯ ರಾಯಭಾರಿ. ಇಂತಹ‌ ಪರಂಪರೆ ಇರುವ ದೇಶದಲ್ಲಿ ಕಾರ್ಕಳದಲ್ಲಿ ನಡೆದಂಥಹ ಅತ್ಯಾಚಾರದ ಘಟನೆಗಳು ಮುಜುಗರಕ್ಕೀಡು ಮಾಡುತ್ತವೆ. ಮನೆಯಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಈ ರೀತೀಯ ದುಷ್ಕೃತ್ಯಗಳು ನಡೆಯುತ್ತಿವೆ. ಆಧುನಿಕ ಕಾಲದಲ್ಲಿ ಭಯ ಮಾಯೆಯಾಗಿ‌ ಭಕ್ತಿ ಯಾಂತ್ರಿಕವಾಗಿದೆ. ಹೀಗಾಗಿ ಸಮಾಜ ದಾರಿ ತಪ್ಪುತ್ತಿದೆ. ಇಂತಹ ದುಷ್ಕೃತ್ಯಗಳ ವಿರುದ್ಧ ಸರಕಾರ ಅತ್ಯಂತ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಹೇಶ್ ಶೆಟ್ಟಿ ಕುಡುಪುಲಾಜೆ ಮಾತಾನಾಡಿ, ಹಿಂದೂ ಸಮುದಾಯದ ಹೆಣ್ಣುಮಗಳ ಮೇಲೆ ನಡೆದ ಪ್ರತಿಭಟಿಸಿ ಇಂದು ಖಂಡನಾ ಮೆರವಣಿಗೆಯಷ್ಟೇ ನಡೆದಿದೆ. ಮತ್ತೊಮ್ಮೆ ಇಂಥ ಘಟನೆ ನಡೆದರೆ ನಿಮ್ಮ  ಮನೆಗೆ ನುಗ್ಗುತ್ತೇವೆ ಎಂದು ಮಹೇಶ್‌ ಶೆಟ್ಟಿ ಕುಡುಪುಲಾಜೆ ಎಚ್ಚರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top