ಇನ್ನೂ 6 ತಿಂಗಳು ಬಾಹ್ಯಾಕಾಶದಲ್ಲೇ ಬಾಕಿಯಾಗಲಿದ್ದಾರೆ ಸುನಿತಾ ವಿಲ್ಲಿಯಮ್ಸ್‌

ನ್ಯೂಯಾರ್ಕ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಕಳೆದ ಸುಮಾರು 80 ದಿನಗಳಿಂದ ಬಾಕಿಯಾಗಿರುವ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ವಾಪಸಾಗಲು ಇನ್ನೂ 6 ತಿಂಗಳು ಬೇಕಾಗಬಹುದು ಎಂದು ನಾಸಾ ಹೇಳಿದೆ.
ಅವರು ಗಗನಯಾತ್ರೆ ಕೈಗೊಂಡಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ಏರ್‌ಕ್ರಾಫ್ಟನ್ನು ನಾಸಾ ಭೂಮಿಗೆ ತರಲಿದೆ. ಆದರೆ ಸುನಿತಾ ಮತ್ತು ವಿಲ್ಮೋರ್‌ ಅವರನ್ನು ಮುಂದಿನ ಫೆಬ್ರವರಿಯಲ್ಲಿ ಕ್ರ್ಯೂ ಡ್ರಾಗನ್‌ ಕ್ಯಾಪ್ಸೂಲ್‌ನಲ್ಲಿ ಕರೆತರಲಾಗುವುದು ಎಂದು ನಾಸಾ ಹೇಳಿದೆ.

ಜೂನ್ 5 ರಂದು ಉಡಾವಣೆಯಾದ ಬೋಯಿಂಗ್‌ನ ಸ್ಟಾರ್‌ಲೈನರ್‌ನ ಮೊದಲ ಮಾನವ ಸಹಿತ ಹಾರಾಟದಲ್ಲಿ ಸುನಿತಾ ಮತ್ತು ಬುಚ್‌ ವಿಲ್ಮೋರ್‌ ಬಾಹ್ಯಾಕಾಶಕ್ಕೆ ತೆರಳಿ ವಾಪಸು ಬರಲಾಗದೆ ಸಿಕ್ಕಿಬಿದ್ದಿದ್ದಾರೆ. ಅವರು ಪ್ರಯಾಣಿಸಿದ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಅದನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಸಿ ಗಗನಯಾತ್ರಿಗಳಿಬ್ಬರು ಅಲ್ಲೇ ಉಳಿದುಕೊಂಡಿದ್ದಾರೆ. ಎಂಟು ದಿನಗಳವರೆಗೆ ನಿಗದಿಪಡಿಸಲಾದ ಸ್ಟಾರ್‌ಲೈನರ್ ಮಿಷನ್ ಥ್ರಸ್ಟರ್ ವೈಫಲ್ಯಗಳು ಮತ್ತು ಹೀಲಿಯಂ ಸೋರಿಕೆ ಸೇರಿದಂತೆ ಬಾಹ್ಯಾಕಾಶ ನೌಕೆಯ ವಿವಿಧ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರ ವಾಸ್ತವ್ಯ ಸುಮಾರು 80 ದಿನಗಳವರೆಗೆ ವಿಸ್ತರಿಸಲ್ಪಟ್ಟಿದೆ. ಅವರನ್ನು ಸುರಕ್ಷಿತಗಾಗಿ ವಾಪಸು ಕರೆತರಲು ನಾಸಾ ಈಗ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ.
ದಿನದಿಂದ ದಿನಕ್ಕೆ ಗಗನಯಾತ್ರಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿ ಅನಿಶ್ಚಿತಾವಸ್ಥೆಗೆ ಜಾರುತ್ತಿದೆ. ಜೊತೆಗೆ ಅವರ ಬಳಿಯಿರುವ ಆಮ್ಲಜನಕ ಕೂಡ ಖಾಲಿಯಾಗುತ್ತಾ ಬಂದಿದ್ದು, ಇದಕ್ಕೆ ನಾಸಾ ಪರ್ಯಾಯ ವ್ಯವಸ್ಥೆ ಮಾಡಲಿದೆ.

ಜೂನ್ 5 ರಂದು ಉಡಾವಣೆಯಾದ ಬೋಯಿಂಗ್‌ನ ಸ್ಟಾರ್‌ಲೈನರ್‌ನ ಮೊದಲ ಮಾನವ ಸಹಿತ ಹಾರಾಟ ಇದಾಗಿದ್ದು, ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಗಳಿಂದಾಗಿ ಎಂಟು ದಿನಗಳವರೆಗೆ ನಿಗದಿಪಡಿಸಲಾದ ಸ್ಟಾರ್‌ಲೈನರ್ ಮಿಷನ್ ವಿಸ್ತರಿಸಲ್ಪಟ್ಟಿದೆ. ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಯಿಂದ ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳು ಸಾಧ್ಯವಾಗುತ್ತಿಲ್ಲ. ಫೆಬ್ರವರಿ ತನಕ ಸುನಿತಾ ವಿಲ್ಲಿಯಮ್ಸ್‌ ಬುಚ್‌ ವಿಲ್ಮೋರ್‌ ಬಾಹ್ಯಾಕಾಶ ನಿಲ್ದಾಣದಲ್ಲಿ ಸಂಶೋಧನೆ, ನಿರ್ವಹಣೆ, ಸಿಸ್ಟಮ್‌ ಟೆಸ್ಟಿಂಗ್‌ ಮುಂತಾದ ಕೆಲಸಗಳನ್ನು ಮಾಡಿಕೊಂಡು ಕಾಲ ಕಳೆಯಬೇಕಾಗಿದೆ ಎಂದು ನಾಸಾ ಹೇಳಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top