ಪ್ರಧಾನಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್ಗೆ ಪೋಸ್ಟ್ ಮಾಡಿದ ದಾನಿ
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರ ಟ್ರಸ್ಟ್ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ರೂ. ಮೊತ್ತದ ಚೆಕ್ ಕಳಿಸಿದ್ದಾರೆ. ಈ ಚೆಕ್ ಮೇಲೆ ದಾನಿ ಹೆಸರು, ವಿಳಾಸ, ಫೋನ್ ನಂಬರ್ ಕೂಡ ಇದೆ.
ಈ ಚೆಕ್ಕನ್ನು ಪ್ರಧಾನಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್ಗೆ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಚೆಕ್ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್ ಮುಂದಾಗಿದೆ.
ಚೆಕ್ ನೈಜವಾಗಿದೆಯೇ ಯಾರೋ ಕಿಡಿಗೇಡಿಗಳು ಕಳುಹಿಸಿದ್ದಾರೆಯೇ ಎಂದು ಪರಿಶೀಲನೆ ನಡೆಸಲಾಗುವುದು.
ಪ್ರಧಾನಮಂತ್ರಿಗಳ ಪರಿಹಾರ ನಿಧಿಯ ಹೆಸರಿನಲ್ಲಿ ಬರೆದ ಚೆಕ್ಕನ್ನು ಅಂಚೆ ಮೂಲಕ ಟ್ರಸ್ಟ್ಗೆ ಕಳುಹಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಚೆಕ್ ಕಚೇರಿಗೆ ತಲುಪಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಗೆ ಕಳುಹಿಸುವಂತೆ ಟ್ರಸ್ಟ್ನ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.