ಪುತ್ತೂರು: ಗ್ರಾಮ ದೈವಸ್ಥಾನ ಪುಳುವಾರು ಹಾಗೂ ದಾರಂದಕುಕ್ಕು ವೀರ ಮಾರುತಿ ಫ್ರೆಂಡ್ಸ್ ಜಂಟಿ ಆಶ್ರಯದಲ್ಲಿ “ಕೆಸರ್ಡ್ ಒಂಜಿ ದಿನ” ವಿವಿಧ ಗ್ರಾಮೀಣ ಕ್ರೀಡಾಕೂಟ ಆ.25 ಭಾನುವಾರ ಬೀರ್ನಹಿತ್ತಲುನಲ್ಲಿ ನಡೆಯಿತು.
ಪುಳುವಾರು ಗ್ರಾಮ ದೈವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ರೈ ಕುಂಬುರ್ಗಗುತ್ತು ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತುಳು ಸಂಸ್ಕೃತಿ ಆಚಾರ ವಿಚಾರ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಕ್ರಮ. ನಾಗಾರಾಧನೆ ಪ್ರತೀಕ ಮಣ್ಣು. ತುಳು ಸಂಸ್ಕೃತಿಯ ಹಿನ್ನಲೆಯಲ್ಲಿ ನಡೆಯುವ ಕಂಬಳ, ಕೆಸರುಗದ್ದೆ ಮಣ್ಣಿನ ಕ್ರೀಡೆಯಾಗಿದ್ದು, ಇದನ್ನು ಉಳಿಸುವ ಕೆಲಸ ನಮ್ಮ ಮೇಲಿದೆ ಎಂದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದೂ ಸಮಾಜಕ್ಕೆ ಒಗ್ಗಟ್ಟಿದೆ ಎಂಬುದನ್ನು ಕಾರ್ಯಕ್ರಮ ತೋರಿಸಿಕೊಟ್ಟಿದೆ. ನಮ್ಮ ಸಂಸ್ಕೃತಿ ವಿಚಾರಧಾರೆಯನ್ನು ಉ:ಳಿಸುವ ಕೆಲಸ ನಮ್ಮ ಮೇಲಿದೆ. ಹಿಂದೂ ಸಂಸ್ಕೃತಿ ಉಳಿಯದಿದ್ದರೆ ಸಮಾಜ ಉಳಿಯಲು ಸಾಧ್ಯವಿಲ್ಲ. ನಮ್ಮ ಧರ್ಮ, ಸಂಸ್ಕೃತಿ ಮೇಲೆ ದಾಳಿ ಮಾಡುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹಿಂದೂಗಳು ಒಗ್ಗಟ್ಟಾಗಬೇಕು. ಹಿಂದುತ್ವವನ್ನು ಪ್ರತಿಪಾದನೆ ಮಾಡಬೇಕು, ಉಳಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದು.
ಅತಿಥಿಗಳಾಗಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪ್ರಗತಿಪರ ಕೃಷಿಕ ಅಜಿತ್ ಕುಮಾರ್ ರೈ ಕಾಯರ್ತಾಡಿ, ಗ್ರಾಮ ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ರಘುನಾಥ ರೈ ಏಕ, ಕೊಲ್ಯ ಫಾರ್ಮ್‍ನ ಪ್ರಕಾಶ್ಚಂದ್ರ ರೈ ಕುಂಬುರ್ಗಗುತ್ತು, ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಬೀರಿಗ, ಬನ್ನೂರು ಗ್ರಾಮ ಪಂಚಾಯಿತಿ ಪಿಡಿಒ ಚಿತ್ರಾವತಿ, ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ.ನಾರಾಯಣ, , ಬೀರ್ನಹಿತ್ಲು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ, ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಜಯ ಏಕ, ತಿಮ್ಮಪ್ಪ ಮೂಡಾಯೂರು, ರಾಘವೇಂದ್ರ ಪಾಲ್ಗೊಂಡು ಶುಭ ಹಾರೈಸಿದರು.
ದಾರಂದಕುಕ್ಕು ವೀರ ಮಾರುತಿ ಫ್ರೆಂಡ್ಸ್ ನ ಅಧ್ಯಕ್ಷ ತಿಮ್ಮಪ್ಪ ಗೌಡ ಪುಳುವಾರು, ಪ್ರಧಾನ ಕಾರ್ಯದರ್ಶಿ ಜಗದೀಶ್ ಬೀರಿಗ, ಕೋಶಾಧಿಕಾರಿ ಕೃಷ್ಣಪ್ರಸಾದ್ ಬೀರ್ನಹಿತ್ಲು, ಕ್ರೀಡಾ ಕಾರ್ಯದರ್ಶಿ ಚಿದಾನಂದ ಬೀರಿಗ, ಉಪಾಧ್ಯಕ್ಷರಾದ ನಾಗೇಶ್ ಟಿ.ಎಸ್. ಕೆಮ್ಮಾಯಿ, ಮೋನಪ್ಪ ಗೌಡ ಬೀರಿಗ, ಕಾರ್ಯದರ್ಶಿ ಪ್ರಕಾಶ್ ಪಂಜಿಗ, ಜತೆ ಕಾರ್ಯದರ್ಶಿ ಯೋಗೀಶ್ ಮೇರ್ಲ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.