ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿಭಾಗ ವಿಶ್ವ ಉದ್ಯಮಿಗಳ ದಿನವನನ್ನು ಸ್ಫೂರ್ತಿದಾಯಕ ಯಶಸ್ಸು, ಸ್ಫೂರ್ತಿ ಮತ್ತು ಬೆಳವಣಿಗೆಯ ಬಗ್ಗೆ ಹಳೆಯ ವಿದ್ಯಾರ್ಥಿಗಳ ಅರಿವು ಎಂಬ ವಿಷಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು.
ಸೀಮೆನ್ಸ್ ಎಜಿಯ ಹೋಡ್ ಗ್ಲೋಬಲ್ ಸಿಆರ್‌ಎಂಒ ಶ್ರೀನಿವಾಸ ವೆಂಕಟೇಶ್ ಮೂರ್ತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಶ್ರೀಮೂರ್ತಿ ಅವರು ಉದ್ಯಮಿಗಳಾಗಲು ಎದುರಿಸಿದ ಸವಾಲುಗಳು ಮತ್ತು ತಮ್ಮ ಉದ್ಯಮಿತ್ವದ ಆರಂಭಿಕ ಹಂತಗಳಲ್ಲಿ ಅನುಭವಿಸಿದ ಕಷ್ಟಗಳು ಸೇರಿದಂತ, ತಮ್ಮ ಯಶಸ್ವಿ ಜೀವನಯಾನವನ್ನು ವಿದ್ಯಾರ್ಥಿಗಳಿಗೆ ಹಂಚಿಕೊಂಡರು
ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯಕುಮಾರ ಮೊಳೆಯಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ಬಳಸಿಕೊಂಡು, ಉದ್ಯಮದ ಕ್ಷೇತ್ರದಲ್ಲಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮ್ಯಾನೆಜ್ ಮೆಂಟ್ ಅಸೋಸಿಯೇಷನ್ ಸಂಯೋಜಕಿ ಪುಷ್ಪ ಎನ್. ಉಪಸ್ಥಿತರಿದ್ದರು. ಮಹಿಮಾ ಭಟ್ ಪ್ರಾರ್ಥನೆ ಹಾಡಿದರು. ಬಿಬಿಎ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಸ್ವಾಗತಿಸಿದರು. ತಾಂಝೀರಾ ವಂದಿಸಿದರು. ಅನಘಾ ಕಾರ್ಯಕ್ರಮ ನಿರ್ವಹಿಸಿದರು.