ಕಾರ್ಕಳ : ಅನ್ಯಕೋಮಿನವರಿಂದ ಯುವತಿ ಮೇಲೆ ಗ್ಯಾಂಗ್‌ರೇಪ್‌

ಬಿಯರ್‌ಗೆ ಮತ್ತು ಬರಿಸುವ ಔಷಧ ಬೆರೆಸಿ ಕುಡಿಸಿ ಕೃತ್ಯ

ಕಾರ್ಕಳ: ಅನ್ಯಕೋಮಿನ ಯುವಕರ ತಂಡ ಯುವತಿಯೊಬ್ಬಳಿಗೆ ಬಿಯರ್‌ನಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಕುಡಿಸಿ ಕಾಡಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಿನ್ನೆ ಕಾರ್ಕಳದಲ್ಲಿ ಸಂಭವಿಸಿದೆ.
ರೇಷ್ಮೆ ಕೃಷಿ ಮಾಡಿಕೊಂಡಿರುವ ಬೋವಿ ಸಮುದಾಯದ 21ರ ಹರೆಯದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ರಾತ್ರಿಯೇ ಆಸ್ಪತ್ರೆ ಎದುರು ಹಿಂದು ಕಾರ್ಯಕರ್ತರು ಜಮಾಯಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಕಾರ್ಕಳ ಸಮೀಪ ಕುಕ್ಕುಂದೂರಿನ ಯುವತಿಗೆ ಸುಮಾರು 3 ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಲಾರಿ ಮಾಲಕ ಅಲ್ತಾಫ್‌ ಎಂಬಾತನ ಪರಿಚಯವಾಗಿತ್ತು. ನಿನ್ನೆ ಮಧ್ಯಾಹ್ನ 12 ವೇಳೆಗೆ ಕಾರಿನಲ್ಲಿ ಯುವತಿಯ ಜೇನುಕೃಷಿ ಇದ್ದ ಅಯ್ಯಪ್ಪ ನಗರಕ್ಕೆ ಬಂದ ಈತ ಯುವತಿಯನ್ನು ಒತ್ತಾಯಪೂರ್ವಕ ಕಾರಿಗೆ ಹತ್ತಿಸಿಕೊಂಡು ಪಳ್ಳಿ ಸಮೀಪದ ರಂಗನಪಲ್ಕೆ ಬಳಿಯ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇನ್ನಿಬ್ಬರು ಬಂದು ಬಿಯರ್‌ ಬಾಟಲಿ ತಂದುಕೊಟ್ಟಿದ್ದಾರೆ. ಅಲ್ತಾಫ್‌ ಬಿಯರ್‌ಗೆ ಮತ್ತು ಬರಿಸುವ ಔಷಧ ಬೆರೆಸಿ ಯುವತಿಗೆ ಬಲವಂತವಾಗಿ ಕುಡಿಸಿ ಆಕೆ ಹತೋಟಿ ಕಳೆದುಕೊಂಡಾಗ ಎಲ್ಲರೂ ಸೇರಿ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ರಾತ್ರಿಯಾಗುವಾಗ ಯುವತಿಯನ್ನು ಅಲ್ತಾಫ್‌ ಮನೆಗೆ ಕರೆತಂದು ಬಿಟ್ಟು ಹೋಗುವಾಗ ಸ್ಥಳೀಯರು ಅವನ ಮೇಲೆ ಅನುಮಾನ ಬಂದು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಯುವತಿಯ ಮೇಲೆ ಅತ್ಯಾಚಾರ ಆಗಿರುವ ವಿಚಾರ ತಿಳಿದುಬಂದಿದೆ. ಯುವತಿಯನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಲಾಗಿದೆ.
ಮುಖ್ಯ ಆರೋಪಿ ಅಲ್ತಾಫ್‌ನನ್ನು ನಿನ್ನೆ ರಾತ್ರಿಯೇ ಬಂಧಿಸಿರುವ ಪೊಲೀಸರು ಇನ್ನೊಬ್ಬನನ್ನು ಇಂದು ಬಂಧಿಸಿದ್ದಾರೆ. ಈ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದು ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಸೇರಿ ಹಲವು ಪ್ರಮುಖರು ಖಂಡಿಸಿ ಆರೋಪಿಗಳನ್ನು ಬಂಧಿಸಲಯ ಒತ್ತಾಯಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top