ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಗೆ ದಿನಾಂಕ, ಸಮಯ ಪ್ರಕಟ

ಪುತ್ತೂರು: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆಸುವ ಕುರಿತು ದಿನಾಂಕ ಪ್ರಕಟವಾಗಿದೆ.

ಸೆಪ್ಟೆಂಬರ್ 3 ರಂದು ದಿನಾಂಕ ಪ್ರಕಟವಾಗಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯ ಮಧ್ಯಾಹ್ನ 12.30 ರಿಂದ 1.30 ರ ತನಕ, ನಾಮಪತ್ರ ಪರಿಶೀಲನೆ 2.30 ರಿಂದ 3, ಕ್ರಮಬದ್ಧವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆ ಮಧ್ಯಾಹ್ನ 3 ರಿಂದ 3.15, ನಾಮಪತ್ರ ವಾಪಸಾತಿಗೆ ಮಧ್ಯಾಹ್ನ 3.15 ರಿಂದ 3.30 ಹಾಗೂ ಅವಶ್ಯಕತೆಯಿದ್ದಲ್ಲಿ ಚುನಾವಣೆ ನಡೆಸಲು 3.30 ರ ನಂತರ.

ನಾಮಪತ್ರವನ್ನು ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ನೀಡಬೇಕು, ಮತದಾನ ದಿನದಂದು ನಿಗದಿ ಪಡಿಸಿದ ಸಮಯದಲ್ಲಿ ಹಾಜರಿರಬೇಕು, ಮತದಾನ ಆರಂಭವಾದ ಬಳಿಕ ಬಂದ ಸದಸ್ಯರಿಗೆ ಮತದಾನ ಮಾಡಲು ಅನುಮತಿಯಿಲ್ಲ, ಅವಧಿ ಮೀರಿ ಸಲ್ಲಿಸಿದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top