ಪುತ್ತೂರು: ಪುತ್ತೂರಿನ ಫ್ಯಾನ್ಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಯೋರ್ವ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.

ಪುತ್ತೂರಿನ ಮಾಯಿದೇ ದೇವುಸ್ ಚರ್ಚ್ ಬಿಲ್ಡಿಂಗ್ ನಲ್ಲಿರುವ ಶಫೀಕ್ ಮಾಲಕತ್ವದ ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಗೆ ತಡರಾತ್ರಿ ಬೆಂಕಿ ಹಚ್ಚಿದ್ದಾನೆ.
ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿ ಫ್ಯಾನ್ಸಿ ಅಂಗಡಿಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.