ಮೋದಿ ಪೋಲೆಂಡ್‌ ಪ್ರವಾಸ : ಮಹಾರಾಜ ಜಾಮ್ ಸಾಹೇಬ್‌ ಸ್ಮಾರಕಕ್ಕೆ ನಮನ

ವಾರ್ಸಾ: ಪೋಲೆಂಡ್‌ ಮತ್ತು ಉಕ್ರೇನ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಜಾಮ್ ಸಾಹಿಬ್ ಸ್ಮಾರಕಕ್ಕೆ ತೆರಳಿ ನಮಿಸಿ ಗೌರವ ಸಲ್ಲಿಸಿದ್ದಾರೆ. ಭಾರತದ ಮಹಾರಾಜ ಜಾಮ್ ಸಾಹೇಬ್‌ ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಸಾವಿರಾರು ಯಹೂದಿ ಮಕ್ಕಳ ಜೀವ ಉಳಿಸಿದ್ದರು.
ಗುಜರಾತಿನ ನವನಗರದ ಮಹಾರಾಜ ಜಾಮ್ ಸಾಹೇಬ್ ಯುದ್ಧದ ಸಂದರ್ಭದಲ್ಲಿ ಪೋಲೆಂಡ್​ನಿಂದ ಭಾರತಕ್ಕೆ ಅನೇಕ ಮಕ್ಕಳನ್ನು ಕರೆತಂದು ಯಹೂದಿಗಳ ಜೀವವನ್ನು ಉಳಿಸಿದ್ದರು ಮಾತ್ರವಲ್ಲದೆ ಅವರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಬುಧವಾರ ಪೋಲೆಂಡ್ ತಲುಪಿದ್ದಾರೆ. ಪೋಲೆಂಡ್‌ನ ಉಪ ಪ್ರಧಾನಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಾರ್ಸಾದ ಹೊಟೇಲ್‌ಗೆ ಪ್ರಧಾನಿ ಮೋದಿ ಆಗಮಿಸಿದ ತಕ್ಷಣ ಅಲ್ಲಿದ್ದ ನೂರಾರು ಭಾರತೀಯರು ಅವರನ್ನು ಸ್ವಾಗತಿಸಿದರು. ಅನಂತರ ಂೋದಿ ನವನಗರದ ಜಾಮ್ ಸಾಹೇಬ್ ಸ್ಮಾರಕಕ್ಕೆ ಹೋದರು. ಇದು ಗುಜರಾತ್‌ನೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿರುವ ಸ್ಥಳವಾಗಿದೆ. ಪೋಲೆಂಡ್‌ನ 1000 ಅನಾಥ ಮಕ್ಕಳನ್ನು ಸಾಕಿದ ಭಾರತೀಯ ಮಹಾರಾಜರ ಹೆಸರನ್ನು ಈ ಸ್ಮಾರಕಕ್ಕೆ ಇಡಲಾಗಿದೆ.

ಅನಾಥ ಮಕ್ಕಳಿಗೆ, ನಿಮ್ಮನ್ನು ಅನಾಥರೆಂದು ಪರಿಗಣಿಸಬೇಡಿ, ನಾನೇ ನಿಮ್ಮ ತಂದೆ ಎಂದು ಮಹಾರಾಜ ಜಾಮ್‌ಸಾಹೇಬ್‌ ಹೇಳಿದ್ದರು. ಪ್ರಧಾನಿ ಮೋದಿ ಆ ಸ್ಥಳಕ್ಕೆ ತೆರಳಿ 80 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು. ವಾರ್ಸಾದ ನವನಗರದಲ್ಲಿ ನಿರ್ಮಿಸಲಾದ ಜಾಮ್ ಸಾಹೇಬ್ ಸ್ಮಾರಕವನ್ನು ಗುಜರಾತ್‌ನ ನವನಗರದ (ಈಗ ಜಾಮ್‌ನಗರ) ಮಾಜಿ ಮಹಾರಾಜ ಜಾಮ್ ಸಾಹೇಬ್ ದಿಗ್ವಿಜಯ್‌ಸಿನ್ಹ​ಜಿ ರಂಜಿತ್‌ಸಿಂನ್ಹ​ಜಿ ಜಡೇಜಾ ಅವರಿಗೆ ಸಮರ್ಪಿಸಲಾಗಿದೆ. ವಾರ್ಸಾದ ಜನರು ಅವರನ್ನು ಬಹಳ ಗೌರವದಿಂದ ನೋಡುತ್ತಾರೆ.
ಮಾರ್ಚ್ 2016 ರಲ್ಲಿ ಪೋಲೆಂಡ್ ಸಂಸತ್ತು ನವನಗರದಲ್ಲಿ ಜಾಮ್ ಸಾಹೇಬ್ ಸ್ಮಾರಕವನ್ನು ನಿರ್ಮಿಸಿದೆ. ಪೋಲೆಂಡ್‌ನ ವಾರ್ಸಾದಲ್ಲಿ ಜಾಮ್ ಸಾಹೇಬ್ ಹೆಸರಿನಲ್ಲಿ ಶಾಲೆಯನ್ನು ತೆರೆಯಲಾಗಿದೆ. ಜಾಮ್‌ನಗರದಲ್ಲಿ ಜಾಮ್ ಸಾಹೇಬ್ ತೆರೆದ ಶಿಬಿರ 1945ರವರೆಗೆ ಇತ್ತು.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top