ಇಂದಿನಿಂದ ಪ್ರಧಾನಿ ಮೋದಿ ಉಕ್ರೇನ್‌, ಪೋಲೆಂಡ್‌ ಪ್ರವಾಸ

ಹೊಸದಿಲ್ಲಿ: ಪೋಲೆಂಡ್‌ ಮತ್ತು ಯುದ್ಧತ್ರಸ್ತವಾಗಿರುವ ಉಕ್ರೇನ್‌ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಇಂದಿನಿಂದ ಪ್ರಾರಂಭವಾಗಲಿದೆ. ಇದು ಮೊರಾರ್ಜಿ ದೇಸಾಯಿ ನಂತರ 45 ವರ್ಷಗಳ ಬಳಿಕ ಯುರೋಪ್‌ ದೇಶಗಳಿಗೆ ಭಾರತದ ಪ್ರಧಾನಿಯೊಬ್ಬರು ನೀಡುವ ಮೊದಲ ಭೇಟಿ. ಈ ವರ್ಷ ಭಾರತ ಮತ್ತು ಪೋಲೆಂಡ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವೂ ಆಗಿದೆ.

ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಪೋಲೆಂಡ್‌ಗೆ ಭೇಟಿ ನೀಡಲಿದ್ದಾರೆ. 45 ವರ್ಷಗಳ ನಂತರ ಭಾರತದ ಪ್ರಧಾನಿ ಪೋಲೆಂಡ್‌ಗೆ ಭೇಟಿ ನೀಡುತ್ತಿರುವ ಕಾರಣ ಇದು ಮಹತ್ವದ ಭೇಟಿಯಾಗಿದೆ.

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 23ರಂದು ಉಕ್ರೇನ್‌ಗೆ ಅಧಿಕೃತ ಭೇಟಿಯನ್ನು ಕೈಗೊಳ್ಳಲಿದ್ದಾರೆ. ಇದು ಒಂದು ಐತಿಹಾಸಿಕ ಭೇಟಿಯಾಗಿದೆ. ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 30 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿರುವುದರಿಂದ ಈ ಭೇಟಿ ಭಾರೀ ಮಹತ್ವ ಪಡೆದಿದೆ.
ನರೇಂದ್ರ ಮೋದಿ ಪೋಲೆಂಡ್‌ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಜತೆ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಭಾರತೀಯ ಸಮುದಾಯವನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ರಾಜಧಾನಿ ವಾರ್ಸಾದಲ್ಲಿ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಲು ಏರ್ಪಾಡು ಮಾಡಲಾಗಿದೆ. ವಾಣಿಜ್ಯೋದ್ಯಮಿಗಳು ಮತ್ತು ಪ್ರಮುಖ ಪರಿಸರ ಶಾಸ್ತ್ರಜ್ಞರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ.































 
 

ಪೋಲೆಂಡ್‌ನಲ್ಲಿ 25,000 ಭಾರತೀಯ ಸಮುದಾಯದ ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 5,000 ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ‘ಆಪರೇಷನ್ ಗಂಗಾ’ ಸಮಯದಲ್ಲಿ ಪೋಲೆಂಡ್ ಸರ್ಕಾರ ಮತ್ತು ಜನರು ಸಹಾಯ ಮಾಡಿದ್ದರು. 2022ರಲ್ಲಿ ಪೋಲೆಂಡ್ ಮೂಲಕ 4,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು.

ಪೋಲೆಂಡ್‌ನಿಂದ ಶುಕ್ರವಾರ ಮೋದಿ ರೈಲ್ ಫೋರ್ಸ್ ಒನ್ ಎಂಬ ರೈಲಿನಲ್ಲಿ ಉಕ್ರೇನ್ ರಾಜಧಾನಿ ಕೈವ್‌ಗೆ ಪ್ರಯಾಣಿಸಲಿದ್ದಾರೆ. ಇದು ಸುಮಾರು 10 ಗಂಟೆಗಳ ಪ್ರಯಾಣ. 2022ರಲ್ಲಿ ಉಕ್ರೇನ್​ನ ಕೈವ್ ರಷ್ಯಾದ ಪಡೆಗಳಿಂದ ದಾಳಿಗೊಳಗಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಇದೇ ಮೊದಲ ಬಾರಿಗೆ ಉಕ್ರೇನ್​ಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ 30 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ಭೇಟಿ ನೀಡುತ್ತಿರುವದು ಇದೇ ಮೊದಲು. ಕೈವ್ ಮೇಲೆ ರಷ್ಯಾ ಮಿಲಿಟರಿ ಆಕ್ರಮಣವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮೋದಿಯವರ ಭೇಟಿ ಮಹತ್ವ ಪಡೆದಿದೆ.

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ಕೃಷಿ, ಮೂಲಸೌಕರ್ಯ, ಔಷಧ ಕ್ಷೇತ್ರ, ಆರೋಗ್ಯ ಮತ್ತು ಶಿಕ್ಷಣ, ರಕ್ಷಣೆ ಮತ್ತು ಭಾರತ-ಉಕ್ರೇನ್ ಬಾಂಧವ್ಯದ ಂತ್ತಿತರ ವಿಚಾರಗಳ ಕುರಿತು ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಎರಡು ವರ್ಷಗಳ ಯುದ್ಧದಿಂದ ಜರ್ಜರಿತಗೊಂಡಿರುವ ಉಕ್ರೇನ್‌ ದೇಶಕ್ಕೆ ಭಾರತದ ಪ್ರಧಾನಿ ಭೇಟಿ ನೀಡುವ ಕಾರ್ಯಕ್ರಮವನ್ನು ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top