ಪುತ್ತೂರು : ನಗರದ ಪಡೀಲು ಪರಿಸರದಲ್ಲಿ ಸುತ್ತಾಡುತ್ತಾ ಸಾರ್ವಜನಿಕರನ್ನು ಭಯಭೀತಿಗೊಳಿಸುತ್ತಿದ್ದ ಸುಮಾರು 35 ವರ್ಷ ವಯೋಮಾನದ ಯುವಕ ಓರ್ವನನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿನೋದ್ ಡಿ ಟಿ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಮಾಜಿ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಿ ಮಾನಸಿಕ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿಲಾಗಿದೆ.

ಆ: 18 ಆದಿತ್ಯವಾರದಂದು ಬೆಳಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ಪುತ್ತೂರಿನ ಪಡೀಲು ಎಂಬಲ್ಲಿ ನೀಲಿ ಬಣ್ಣದ ಸೆಕ್ಯೂರಿಟಿ ಗಾರ್ಡ್ ಅಂಗಿಯನ್ನು ಧರಿಸಿ ಸುತ್ತಮುತ್ತಲ ಮನೆಗಳಿರುವ ಪರಿಸರದಲ್ಲಿ ವಿಚಿತ್ರ ವರ್ತನೆಗಳನ್ನು ಮಾಡುತ್ತಾ ವಿಚಿತ್ರ ಹಾವಭಾವಗಳಿಂದ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳಿಗೆ ಭಯವನ್ನುಂಟು ಮಾಡುತ್ತಾ ಓಡಾಟ ಮಾಡುತ್ತಿರುವ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯ ಸುರೇಶ್ ಪಡೀಲ್ ಎಂಬವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿ ಮಾನಸಿಕ ಅಸ್ವಸ್ಥ ಯುವಕನನ್ನು ಹತೋಟಿಗೆ ತಂದ ಪುತ್ತೂರು ನಗರ ಸಿಬ್ಬಂದಿಗಳಾದ ಶ್ರೀ ವಿನೋದ್ ಅವರು ರೋಟರಿ ಕ್ಲಬ್ ಪುತ್ತೂರು ಯುವ ಇದರ ಮಾಜಿ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರ ಸಹಕಾರದಿಂದ ಮಾನಸಿಕ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದ ಘಟನೆ ನಡೆದಿದೆ. ಅಸ್ವಸ್ಥ ಯುವಕ ಅಸ್ಪಷ್ಟ ರೀತಿಯಲ್ಲಿ ಮಾತುಗಳನ್ನಾಡುತ್ತಿದ್ದು ಮತಿಭ್ರಮಿತನಾಗಿದ್ದಾನೆ , ಹಿಂದಿ ಹಾಗೂ ತಮಿಳು ಭಾಷೆ ಬಲ್ಲವನಾದ ಈತ ತನ್ನ ಹೆಸರು ಚಿನ್ನು ನಾಯ್ಕ್ ಎಂದು ಹೇಳುತ್ತಿದ್ದೂ, ಸುಮಾರು 35 ವರ್ಷ ವಯೋಮಾನದವನಾಗಿದ್ದಾನೆ.ಈತ ಗುಣಮುಖನಾದ ಬಳಿಕ ವಾರಿಸುದಾರರ ಪತ್ತೆಗೆ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸುವಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ಪ್ರಶಾಂತ್ ಭಟ್ ಹಾಗೂ 108 ವಾಹನ ಸಿಬ್ಬಂದಿಗಳು ಸಹಕರಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ವಾಹನ ಚಾಲಕರಾದ ಸಂತೋಷ ಗಂಧರಗಿ ಹಾಗೂ ಸುಧಾಕರ್ ಬನ್ನೂರು ಸಹಕರಿಸಿದ್ದರು.