ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 43ನೇ ಕಾರ್ಯಕ್ರಮವಾಗಿ ಸಂಜಯ ರಾಯಭಾರ ಮತ್ತು ರಣವೀಳ್ಯತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅವರನ್ನು ಯಕ್ಷಗಾನ ಸಂಘಟನೆಗಾಗಿ ಕಾರ್ಯಕ್ರಮದ ಪ್ರಾಯೋಜಕ ಅಮ್ಮಿ ಗೌಡ ನಾಲ್ಗುತ್ತು ಗೌರವಿಸಿದರು. ಯಕ್ಷಗಾನ ಕಲಾವಿದ, ಉಪನ್ಯಾಸಕ ಗುಡ್ಡಪ್ಪ ಬಲ್ಯ ಅಭಿನಂದನಾ ನುಡಿಗಳನ್ನಾಡಿದರು.
ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಲಂತಿಲ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಿ.ಸುರೇಶ ರಾವ್, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಸಹಕರಿಸಿದರು.
ಸಂಜಯರಾಯಭಾರದಲ್ಲಿ ಶ್ರೀಧರ ಎಸ್ ಪಿ ಸುರತ್ಕಲ್ (ಸಂಜಯ ), ಹರೀಶ್ ಆಚಾರ್ಯ ಬಾರ್ಯ(ಶ್ರೀಕೃಷ್ಣ ), ಜಯರಾಮ ಬಲ್ಯ (ಭೀಮ ), ಸಂಜೀವ ಅನುಗ್ರಹ ಪಾರೆಂಕಿ(ಧರ್ಮರಾಯ ), ಮಹಾಲಿಂಗೇಶ್ವರ ಭಟ್ (ದ್ರುಪದ), ಪುಷ್ಪಲತಾ .ಯಂ (ದ್ರೌಪದಿ ), ಶ್ರುತಿ ವಿಸ್ಮಿತ್ (ಅರ್ಜುನ ), ರಣವೀಳ್ಯದಲ್ಲಿ ಅಮ್ಮಿ ಗೌಡ ನಾಲ್ಗುತ್ತು, (ಕೌರವ ), ತಿಮ್ಮಪ್ಪ ಕೋಟೆಕಾರು (ಶ್ರೀಕೃಷ್ಣ), ದಿವಾಕರ ಆಚಾರ್ಯ ನೇರೆಂಕಿ.(ವಿದುರ ) ಸಹಕರಿಸಿದರು.